Friday, June 26, 2026
spot_imgspot_img
spot_imgspot_img

ಗಾಳಿಮುಖ: ಅನ್ಯಕೋಮಿನ ಯುವಕರಿಂದ ತಡರಾತ್ರಿ ದಲಿತ ಮಹಿಳೆಯ ಮನೆಗೆ ನುಗ್ಗಿ ಕೈ ಎಳೆದು ಹಲ್ಲೆ; ಹಿಂ.ಜಾ.ವೇ ಯಿಂದ ಮಹಿಳೆಯ ರಕ್ಷಣೆ

- Advertisement -
- Advertisement -

ಗಾಳಿಮುಖ: ತಡ ರಾತ್ರಿ ಅನ್ಯ ಕೋಮಿನ ತಂಡವೊಂದು ಮಹಿಳೆಯೊಬ್ಬರ ಮನೆಗೆ ಅಕ್ರಮವಾಗಿ ನುಗ್ಗಿ ಕೈ ಹಿಡಿದು ಎಳೆದು ಜಾತಿ ನಿಂಧನೆ ಮಾಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಗಾಳಿಮುಖದ ದಿ. ರಾಜು ಮಾದಿಗ ಎಂಬವರ ಪತ್ನಿ ಆಶಾ (35) ಎಂಬವರು ಸಂತ್ರಸ್ತೆಯಾಗಿದ್ದು. ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು ಆ.16ರ ರಾತ್ರಿ ಊಟಕ್ಕೆ ಕೂತಿದ್ದ ವೇಳೆ ಗಾಳಿಮುಖದ ಖಾದರ್, ಮಹಮ್ಮದ್, ಶಾಬೀರ್, ಶಾಪಿ, ಅಶ್ರಪ್ ಕೊಟ್ಯಾಡಿ ಸೇರಿದಂತೆ ಸುಮಾರು 20 ಮಂದಿಯ ತಂಡವೊಂದು ಅಕ್ರಮವಾಗಿ ನಮ್ಮ ಮನೆಗೆ ನುಗ್ಗಿ ನನ್ನ ಕೈ ಹಿಡಿದು ಎಳೆದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕೊರೊನಾಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು

ಈ ವೇಳೆ ಮನೆಯಲ್ಲಿದ್ದ ನನ್ನ ಮಗ ಗುರುಪ್ರಸಾದ್, ಅಕ್ಕನ ಮಗ ಸೀತಾರಾಮ, ಅಳಿಯ ಚಂದ್ರಶೇಖರ್ ಎಂಬವರು ತಡೆಯಲು ಬಂದಾಗ ಅವರನ್ನು ದೂಡಿ ಹಾಕಿದ್ದಲ್ಲದೆ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಗೆ ಆಸ್ಪತ್ರೆಗೆ ಹೋಗಲು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ನೆರವಾದರು.

- Advertisement -

Related news

error: Content is protected !!