Friday, June 27, 2025
spot_imgspot_img
spot_imgspot_img

ಟೋಕಿಯೋ ಒಲಿಂಪಿಕ್ಸ್​: ಭಾರತಕ್ಕೆ ಪ್ರಥಮ ಪದಕ ತಂದುಕೊಟ್ಟ ಮೀರಾಬಾಯಿ ಚಾನು

- Advertisement -
- Advertisement -

ಟೋಕಿಯೋ: ಜಾಗತಿಕ ಕ್ರೀಡಾ ಹಬ್ಬ ಟೋಕಿಯೋ ಒಲಿಂಪಿಕ್ಸ್​ ನಲ್ಲಿ ಭಾರತ ಮೊದಲ ಪದಕ ಬೇಟೆಯಾಡಿದೆ.

ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ 49 ಕೆಜಿ ವೇಟ್​ ಲಿಫ್ಟಿಂಗ್​ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಮೀರಾಬಾಯಿ ಚಾನುರವರು 84 ಮತ್ತು 87 ಕೆಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ 89ಕೆಜಿ ಭಾರ ಎತ್ತುವಲ್ಲಿ ವಿಫಲವಾದರು. ಇದರಿಂದ ಅವರು ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದರು.

ಚೀನಾದ ಹೌ ಝಿಜು 94 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

- Advertisement -

Related news

error: Content is protected !!