Sunday, July 26, 2026
spot_imgspot_img
spot_imgspot_img

ನ್ಯಾಯಾಲಯಕ್ಕೆ ಕರೆದುಕೊಂಡು ಬರುತ್ತಿದ್ದ ವೇಳೆ ಕಾಲ್ಕಿತ್ತ ಆರೋಪಿ

- Advertisement -
- Advertisement -
vtv vitla
vtv vitla

ಕಾಸರಗೋಡು: ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾಗ ಪೊಲೀಸರಿಂದ ಆರೋಪಿಯೋರ್ವ ತಪ್ಪಿಸಿ ಪರಾರಿಯಾದ ಘಟನೆ ವಿದ್ಯಾನಗರದಲ್ಲಿ ನಡೆದಿದೆ.

ಆಲಂಪಾಡಿಯ ಆಮಿರಾಲಿ ಪರಾರಿಯಾದ ಆರೋಪಿ. ಕಣ್ಣೂರು ಸೆಂಟ್ರಲ್ ಜೈಲಿನಿಂದ ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದುಕೊಂಡು ಬರುತ್ತಿದ್ದಾಗ ವಿದ್ಯಾನಗರ ಜಂಕ್ಷನ್ ಬಳಿ ಈತ ತಪ್ಪಿಸಿ ಪರಾರಿಯಾಗಿದ್ದಾನೆ.

ಇನ್ನು ಆರೋಪಿ ಆಮಿರಾಲಿ 20ಕ್ಕೂ ಅಧಿಕ ಪ್ರಕರಣದ ಆರೋಪಿಯಾಗಿದ್ದು, ಪರಾರಿಯಾದವನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

- Advertisement -

Related news

error: Content is protected !!