Wednesday, July 22, 2026
spot_imgspot_img
spot_imgspot_img

ಪುತ್ತೂರಿನಲ್ಲಿ ಅಮಿತ್ ಶಾ..! ಕಾಂತಾರ ಮತ್ತು ಅವಿಭಜಿತ ದಕ್ಷಿಣ ಕನ್ನಡದ ಸಂಸ್ಕೃತಿಯನ್ನು ಕೊಂಡಾಡಿದ ಬಿಜೆಪಿ ಚಾಣಕ್ಯ…!

- Advertisement -
- Advertisement -

ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಸಂಭ್ರಮದಲ್ಲಿ ಭಾಗಿಯಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ತುಳುನಾಡಿನ ಪರಂಪರೆಯನ್ನು ಸ್ಮರಿಸಿಕೊಂಡಿದ್ದಾರೆ.

ಪುತ್ತೂರಿಗೆ ಆಗಮಿಸಿ ಮಾತಾಡಿದ ಅಮಿತ್ ಶಾ ಈಗ ತಾನೇ ನಾನು ಕಾಂತಾರ ಚಿತ್ರವನ್ನೂ ನೋಡಿದೆ ಎಂದು ಹೇಳಿದ್ರು. ಜೊತೆಗೆ ಕಾಂತಾರ ಸಿನಿಮಾವನ್ನು ಹೊಗಳಿದ್ದಾರೆ.

ಮಂಗಳೂರಿನ ಪುಣ್ಯಭೂಮಿಗೆ ನಮಿಸುತ್ತಿದ್ದೇನೆ, ಮಂಗಳೂರು ತುಂಬಾ ಪವಿತ್ರ ಭೂಮಿ, ಪರಶುರಾಮನ ಸೃಷ್ಟಿಯ ಭೂಮಿಯಿದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವಿಶ್ವದಲ್ಲೇ ಪ್ರಸಿದ್ಧವಾಗಿದೆ ಎಂದು ಹೇಳಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡದ ಧಾರ್ಮಿಕ, ಸಂಸ್ಕೃತಿಯ ಭಿನ್ನವಾಗಿದೆ ಎಂದಿದ್ದಾರೆ. ರಾಣಿ ಅಬ್ಬಕ್ಕ, ಮಂಗಳಾದೇವಿ, ಕದ್ರಿ ಮಂಜುನಾಥ, ಮಹಲಿಂಗೇಶ್ವರ ಮಂದಿರಕ್ಕೆ ಪ್ರಣಾಮ ಸಲ್ಲಿಸಿದ ಅಮಿತ್ ಶಾ ಭಾಷಣ ಮುಂದುವರಿಸಿದರು.

- Advertisement -

Related news

error: Content is protected !!