Thursday, August 6, 2026
spot_imgspot_img
spot_imgspot_img

ಪುತ್ತೂರು: ಗ್ರಾಮಾಂತರ ಠಾಣಾ ಕೃಷ್ಣಪ್ಪ ಎಮ್ ಎ.ಎಸ್.ಐ ಆಗಿ ಮುಂಭಡ್ತಿ; ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆ

- Advertisement -
- Advertisement -

ಪುತ್ತೂರು: ವೈಟ್ ಲಿಫ್ಟಿಂಗ್ ಆದ್ಯತೆಯಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡು ಹಲವು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಪುತ್ತೂರು ಗ್ರಾಮಾಂತರ ಠಾಣೆಯ ಕೃಷ್ಣಪ್ಪ ಎಮ್ ಅವರು ಎ.ಎಸ್.ಐ ಆಗಿ ಮುಂಭಡ್ತಿ ಹೊಂದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಮೂಲತಃ ಚಾರ್ವಾಕ ನಿವಾಸಿ ಕೃಷ್ಣಪ್ಪ ಎಮ್ ಅವರು ಕ್ರೀಡೆಯ ಮೂಲಕ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಪೊಲೀಸ್ ಇಲಾಖೆಯಲ್ಲಿರುವ ವೇಳೆ ಅವರು ವೈಟ್ ಲಿಫ್ಟಿಂಗ್ ನಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಪೊಲೀಸ್ ಇಲಾಖೆಯಲ್ಲಿ ಮಂಗಳೂರು ಸಂಚಾರ ಪೊಲೀಸ್ ಠಾಣೆ, ವೇಣೂರು, ಕಡಬ, ಪುತ್ತೂರು ನಗರ, ಸಂಪ್ಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಎ.ಎಸ್.ಐ ಆಗಿ ಮುಂಭಡ್ತಿ ಹೊಂದಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇಂದು ಅವರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

- Advertisement -

Related news

error: Content is protected !!