Sunday, June 7, 2026
spot_imgspot_img
spot_imgspot_img

ಪುತ್ತೂರು: ಚಲಿಸುತ್ತಿದ್ದ ಬಸ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ಪ್ರಯಾಣಿಕ ಗಂಭೀರ

- Advertisement -
- Advertisement -

ಪುತ್ತೂರು: ಚಲಿಸುತ್ತಿದ್ದ ಬಸ್ಸಿನಿಂದ ಎಸೆಯಲ್ಪಟ್ಟ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಕುಂಬ್ರದಲ್ಲಿ ನ.೫ರಂದು ಬೆಳಿಗ್ಗೆ ನಡೆದಿದೆ.

ಬೆಳ್ಳಾರೆಯಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಸುಲೈಮಾನ್(60.ವ)ರವರು ಕುಂಬ್ರ ಜಂಕ್ಷನ್ ಬಳಿ ಇಳಿಯುವ ಸಂದರ್ಭದಲ್ಲಿ ಬಸ್ಸಿನೊಳಗಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುಲೈಮಾನ್‌ನವರು ಮಾಡಾವಿನಿಂದ ಕುಂಬ್ರಕ್ಕೆ ಬಸ್ ಹತ್ತಿದ್ದರು. ಕುಂಬ್ರ ತಲುಪುತ್ತಿದ್ದಂತೆ ಬಸ್‌ನಿಂದ ಇಳಿಯಲು ಬಸ್ಸಿನೊಳಗಡೆ ನಿಂತುಕೊಂಡಿದ್ದ ವೇಳೆ ಬಸ್ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಸುಲೈಮಾನ್‌ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

vtv vitla
- Advertisement -

Related news

error: Content is protected !!