- Advertisement -
- Advertisement -



ಪುತ್ತೂರು: ತಾಲೂಕಿನ ನರಿಮೊಗ್ರು ಗ್ರಾಮದ ವೀರಮಂಗಲ ಎಂಬಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ವ್ಯಕ್ತಿಯೋರ್ವರು ಮಹಿಳೆಗೆ ನಾಡಕೋವಿಯಿಂದ ಶೂಟ್ ಮಾಡಿದ ಪ್ರಕರಣ ಭಾನುವಾರ ಸಂಜೆ ನಡೆದಿದೆ. ಕೋವಿಯ ಗುರಿ ತಪ್ಪಿದ ಕಾರಣ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿನ ನಿವಾಸಿ ದೇವಪ್ಪ ಎಂಬಾತ ತಮ್ಮ ಪಕ್ಕದ ಮನೆಯ ಧರ್ಣಮ್ಮ ಎಂಬವರಿಗೆ ನಾಡ ಕೋವಿಯಿಂದ ಶೂಟ್ ಮಾಡಿದ್ದು, ಕೋವಿಯಿಂದ ಮದ್ದು ಗುಂಡು ಹಾರಿದಾಗ ಗುರಿ ತಪ್ಪಿದ ಹಿನ್ನೆಲೆಯಲ್ಲಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ದೂರಲಾಗಿದೆ. ಘಟನಾ ಸ್ಥಳಕ್ಕೆ ತೆರಳಿದ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ಮತ್ತು ಪೊಲೀಸ್ ತಂಡ ವಿಚಾರಣೆ ನಡೆಸುತ್ತಿದ್ದಾರೆ.


- Advertisement -