Tuesday, October 13, 2026
spot_imgspot_img
spot_imgspot_img

ಪುತ್ತೂರು: ಸ್ವತಃ ಪಿಪಿಇ ಕಿಟ್ ಧರಿಸಿ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಕೈ ಜೋಡಿಸಿದ ಶಾಸಕ ಸಂಜೀವ ಮಠಂದೂರು..!

- Advertisement -
- Advertisement -

ಪುತ್ತೂರು: ಕರ್ನಾಟಕದಲ್ಲೇ ಮೊತ್ತಮೊದಲ ಕೊರೋನಾದಿಂದ ಮೃತರಾದವರ ಅಂತ್ಯಸಂಸ್ಕಾರವನ್ನು ಮೊದಲ ಕೋವಿಡ್ ಅಲೆ ಬಂದಾಗ ಮಾಡಿದ್ದು, ಪುತ್ತೂರಿನ ಶಾಸಕರ ವಾರ್ ರೂಂ ಎಂಬುದು ಒಂದಾದರೆ ಇಂದು ಸ್ವತಃ ಶಾಸಕರೇ ಪಿಪಿಇ ಕಿಟ್ ಧರಿಸಿ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಚಿಕ್ಕಪುತ್ತೂರು ನಿವಾಸಿ ಕಾಂಚನ (52) ಎಂಬವರು ಕೋವಿಡ್ ನಿಂದ ನಿನ್ನೆ ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಇವರ ಅಂತ್ಯಸಂಸ್ಕಾರವನ್ನು ಇಂದು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಅವರು ಬಜರಂಗದಳದ ಕಾರ್ಯಕರ್ತರ ಜೊತೆಗೆ ಪಿ.ಪಿ.ಇ ಕಿಟ್ ಧರಿಸಿ ನೆರವೇರಿಸಿದರು.

ಇದು ರಾಜ್ಯದಲ್ಲೇ ಮೊದಲು ಶಾಸಕರೇ ಅಂತ್ಯ ಸಂಸ್ಕಾರ ನಡೆಸಿರುವುದು ಎಂಬುದು ಗಮನಾರ್ಹ ವಿಷಯವಾಗಿದೆ.

- Advertisement -

Related news

error: Content is protected !!