Saturday, June 28, 2025
spot_imgspot_img
spot_imgspot_img

ಬಂಟ್ವಾಳ: ನೂತನ DYSP ಆಗಿ ಪ್ರತಾಪ್ ಸಿಂಗ್ ತೋರಾಟ್ ನೇಮಕ

- Advertisement -
- Advertisement -

ಬಂಟ್ವಾಳ : ಬಂಟ್ವಾಳದ ನೂತನ ಡಿ.ವೈ.ಎಸ್.ಪಿ ಆಗಿ ಪ್ರತಾಪ್ ಸಿಂಗ್ ತೋರಾಟ್ ಅವರು ಅಧಿಕಾರ ಸ್ವೀಕಾರಿಸಿದ್ದಾರೆ.

ಎ.ಎಸ್.ಪಿ‌.ಶಿವಾಂಶು ರಜಪೂತ್ ಅವರ ಬಳಿಕ ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ಪ್ರತಾಪ್ ಸಿಂಗ್ ತೋರಾಟ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಎ.ಎಸ್.ಪಿ‌.ಶಿವಾಂಶು ರಜಪೂತ್ ಅವರು ಹೆಚ್ಚಿನ ತರಬೇತಿಯ ಹಿನ್ನೆಲೆಯಲ್ಲಿ ಹೋಗಿದ್ದಾಗ ಬಂಟ್ವಾಳಕ್ಕೆ ಪ್ರಭಾರ ಡಿ.ವೈ.ಎಸ್.ಪಿ.ಯಾಗಿ ಪ್ರತಾಪ್ ಸಿಂಗ್ ತೋರಾಟ್ ಅವರನ್ನು ನೇಮಕ ಮಾಡಲಾಗಿತ್ತು.

DYSP ಪ್ರತಾಪ್ ಸಿಂಗ್ ತೋರಾಟ್

ಪ್ರತಾಪ್ ಸಿಂಗ್ ತೋರಾಟ್ ಅವರು ಅನುಭವಿ ಪೊಲೀಸ್ ಅಧಿಕಾರಿಯಾಗಿ ಅನೇಕ ಕಡೆಗಳಲ್ಲಿ ಸಿ.ಸಿ.ಬಿ ಸಹಿತ ವಿವಿಧ ವಿಂಗ್’ಗಳಲ್ಲಿ ಕೆಲಸ ಮಾಡಿ ಹೆಸರು ಪಡೆದ ಓರ್ವ ದಕ್ಷ ಅಧಿಕಾರಿಯಾಗಿದ್ದಾರೆ. ಬೆಂಗಳೂರು, ಕಾರವಾರ, ಬೆಳಗಾಂ, ಬಳ್ಳಾರಿಯಲ್ಲಿ ಇವರು ಕೆಲಸ ಮಾಡಿ ಇದೀಗ ಐಎಸ್‌ಡಿ’ಯಿಂದ ಬಂಟ್ವಾಳ ಡಿ.ವೈ.ಎಸ್. ಪಿ.ಯಾಗಿ ವರ್ಗಾವಣೆಯಾಗಿದ್ದಾರೆ.

- Advertisement -

Related news

error: Content is protected !!