Sunday, June 29, 2025
spot_imgspot_img
spot_imgspot_img

ಬಾಲಕಿಯ ಕತ್ತು ಕೊಯ್ದು ಆ್ಯಸಿಡ್ ಎರಚಿದ ಸಂಬಂಧಿಕ

- Advertisement -
- Advertisement -

14 ವರ್ಷದ ಬಾಲಕಿಯ ಕತ್ತು ಕೊಯ್ದಿದ್ದೂ ಅಲ್ಲದೇ ಆಕೆಯ ಮುಖದ ಮೇಲೆ ಸಂಬಂಧಿಕನೊಬ್ಬ ಆಸಿಡ್‌ ಎರಚಿದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ವೆಂಕಟಾಚಲಂ ಗ್ರಾಮದ ಚೆಮುಡುಗುಂಟಾ ಕಾಲೋನಿಯ ಬಾಲಕಿ ಮೇಲೆ ಸಂಬಂಧಿ ಈ ಕೃತ್ಯ ಎಸಗಿದ್ದು, ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಮುಖದ ಮೇಲೆ ಬಿದ್ದಿರುವ ಆಸಿಡ್‌ ನಿಂದ ಬಾಲಕಿ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಸಂಬಂಧಿಕ ವ್ಯಕ್ತಿ ಈ ಕೃತ್ಯ ಎಸಗಿದ್ದು ಯಾಕೆ ಎಂಬುದು ತಿಳಿದು ಬಂದಿಲ್ಲ. ಆದರೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಬಾಲಕಿ ಹತ್ಯೆಗೆ ಯತ್ನಿಸಿದ್ದಾನೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

astr
- Advertisement -

Related news

error: Content is protected !!