Saturday, June 28, 2025
spot_imgspot_img
spot_imgspot_img

ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶಿಸಿದ ನಟ ಶ್ರೀಜಿತ್ ರವಿ ಅರೆಸ್ಟ್

- Advertisement -
- Advertisement -

ಸಾರ್ವಜನಿಕವಾಗಿ ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪದ ಮೇಲೆ ಮಲೆಯಾಳಂನ ಖ್ಯಾತ ನಟ ಶ್ರೀಜಿತ್ ರವಿ ಅವರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

ಜುಲೈ 4 ರಂದು ಅಯ್ಯಂತೊಳೆ ಎಸ್‌ಎನ್‌ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಸದ್ಯ ಶ್ರೀಜಿತ್‌ ರವಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಗಿದೆ ಎಂದು ತ್ರಿಶೂರ್ ಪಶ್ಚಿಮ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಇಬ್ಬರು ಅಪ್ರಾಪ್ತ ಬಾಲಕಿಯರು ನಿಂತಿದ್ದ ವೇಳೆ ತನ್ನ ಕಾರಿನಲ್ಲಿ ಕುಳಿತಿದ್ದ ಶ್ರೀಜಿತ್ ಕಾರಿನಿಂದ ಕೆಳಗಿಳಿದು ಗುಪ್ತಾಂಗವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಬಳಿಕ ರವಿ ಅವರನ್ನು ಬಂಧಿಸಲಾಗಿದೆ. ಇಬ್ಬರು ಮಕ್ಕಳ ಪೋಷಕರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2016ರಲ್ಲಿ ಪಾಲಕ್ಕಾಡ್ ಪೊಲೀಸರು ಇಂತಹದೇ ಪ್ರಕರಣದಲ್ಲಿ ರವಿಯನ್ನು ಬಂಧಿಸಿದ್ದರು.

- Advertisement -

Related news

error: Content is protected !!