
ಬೆಳ್ತಂಗಡಿ: ನಿಯಂತ್ರಣ ಕಳೆದುಕೊಂಡ ಬೈಕ್ ಮನೆಯ ಗೇಟಿನ ಬಳಿ ಇದ್ದ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆ ಉಜಿರೆಯ ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ತಿರುವಿನ ರಸ್ತೆಯಲ್ಲಿ ನಡೆದಿದೆ. ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟಿರುವ ಘಟನೆ ನ.23 ರಂದು ರಾತ್ರಿ ವೇಳೆ ನಡೆದಿದೆ. ನೆರಿಯ ಗ್ರಾಮದ ಪಾದೆಗುಡ್ಡೆ ನಿವಾಸಿ ನೋಣಯ್ಯ ಗೌಡರ ಪುತ್ರ ಪ್ರದೀಪ್ (22) ದುರ್ದೈವಿ.
ಪ್ರದೀಪ್ ಸಂಬಂಧಿಗಳ ಮನೆಯಲ್ಲಿ ಇರುವ ಶುಭ ಕಾರ್ಯದ ನಿಮಿತ್ತ ವಸ್ತುವೊಂದನ್ನು ನೀಡಲು ಹೋಗುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತವಾದ ರಸ್ತೆಯು ಅಪಾಯಕಾರಿ ವಲಯವಾಗಿದ್ದು , ಈ ಹಿಂದೆ ಕೂಡ ಇಲ್ಲಿ ಹಲವಾರು ಭಾರಿ ಅಪಘಾತ ಮತ್ತು ಪ್ರಾಣಹಾನಿ ಸಂಭವಿಸಿದೆ.

ಪ್ರದೀಪ್ ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಎಡ ಭಾಗದಲ್ಲಿರುವ ಮನೆಯ ಗೇಟಿನ ಬಳಿ ಇದ್ದ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲಿದ್ದ ಸ್ಥಳೀಯರು ತಕ್ಷಣ ಪ್ರದೀಪ್ ಅವರನ್ನು ಉಜಿರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರಿಗೆ ಸಾಗಿಸುವ ಮಧ್ಯ ದಾರಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
- ಅಪ್ರಾಪ್ತರಿಗೆ ಸಾಮಾಜಿಕ ಜಾಲತಾಣ ನಿಷೇಧಕ್ಕೆ ಕೇಂದ್ರ ಚಿಂತನೆ: ನಿಯಮ ರೂಪಿಸಲು ಸುಪ್ರೀಂ ಸೂಚನೆ
- ಮಂಗಳೂರು: 1.60 ಲಕ್ಷ ಮೌಲ್ಯದ 16 ಗ್ರಾಂ ಮಾದಕ ವಸ್ತು ವಶ – ಆರೋಪಿಯ ಬಂಧನ
- ಹಾಸನದಲ್ಲಿ ಭೀಕರ ಅಪಘಾತಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು!
- ಮಡಗಾಂವ್ – ಮಂಗಳೂರು ವಂದೇ ಭಾರತ್ ಬೆಂಗಳೂರುವರೆಗೆ ವಿಸ್ತರಣೆ
- Critical Security Guidelines For Downloading Free Software From the Internet










