Sunday, August 30, 2026
spot_imgspot_img
spot_imgspot_img

ಬೈಕ್ ಗೆ ಡಿಕ್ಕಿ ಹೊಡೆದ ಕಾರು; ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವು

- Advertisement -
- Advertisement -

ಬೆಂಗಳೂರು: ಏರ್‌ಪೋರ್ಟ್ ರಸ್ತೆಯ ಮೇಲ್ಸೇತುವೆ ಮೇಲೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದು ಮೃತಪಟ್ಟಿದ್ದು, 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಗೋವಿಂದಪ್ಪ ಮೃತಪಟ್ಟ ವ್ಯಕ್ತಿ. ಅಪಘಾತದ ರಭಸಕ್ಕೆ ಮೆಲ್ಸೇತುವೆಯಿಂದ ಗೋವಿಂದಪ್ಪ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಿಂಬದಿ ಕೂತಿದ್ದ ಆತನ ಪುತ್ರ ಸಂಜಯ್‌ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್.ಪುರಂ ಬಳಿ ಕಾರು ಚಾಲಕ ವರುಣ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕುಟುಂಬ ಸಮೇತ ಸಂಬಂಧಿಕರ ಮನೆಗೆ ಬಂದಿದ್ದ ಗೋವಿಂದಪ್ಪ ತನ್ನ ಮಗ ಸಂಜಯ್‌ಗೆ ಏರೋ ಡ್ರಮ್ ತೋರಿಸಲು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದಿದ್ದರು. ಏರ್ ಪೋರ್ಟ್ ರಸ್ತೆ ಮೇಲ್ಸೇತುವೆ ಮೇಲೆ ಬೈಕ್ ನಿಲ್ಲಿಸಿ ಪುತ್ರನಿಗೆ ಏರೋ ಡ್ರಮ್ ತೋರಿಸುತ್ತಿದ್ದ ವೇಳೆ ಏರ್‌ ಪೋರ್ಟ್‌ನಿಂದ ಬೆಂಗಳೂರು ಕಡೆಗೆ ಅತಿ ವೇಗವಾಗಿ ಬರುತ್ತಿದ್ದ ಕಾರು ಗೋವಿಂದಪ್ಪನ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಆತ ಮೆಲ್ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ದ್ವಿಚಕ್ರ ವಾಹನ 200 ಮೀಟರ್ ಹಾರಿಕೊಂಡು ಹೋಗಿದೆ. ಜೆ.ಸಿ. ನಗರದ ಮೆಡಿಕಲ್ ಕಂಪನಿಯಲ್ಲಿ ಕೆಲಸ ಮಾಡುವ ವರುಣ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಜಾಲಿ ರೇಡ್ ಮಾಡುತ್ತಿದ್ದ.

ಈ ವೇಳೆ ನಿಯಂತ್ರಣ ತಪ್ಪಿದ ಕಾರು ಗೋವಿಂದಪ್ಪನಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಕಾರು ಸಮೇತ ವರುಣ್ ಪರಾರಿಯಾಗಲು ಯತ್ನಿಸಿದ್ದು, ಕೆ.ಆರ್.ಪುರಂ ಬಳಿ ಪೊಲೀಸರು ಬಂಧಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!