Sunday, July 6, 2025
spot_imgspot_img
spot_imgspot_img

ಭಾರತೀಯ ನೌಕಾದಳಕ್ಕೆ ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಸೇರ್ಪಡೆ

- Advertisement -
- Advertisement -

ಮುಂಬೈ: ಭಾರತೀಯ ನೌಕಾದಳಕ್ಕೆ ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಬುಧವಾರ ಸೇರ್ಪಡೆಯಾಗಿದೆ. ಆ ಮೂಲಕ ನೌಕಾದಳಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.

ಪ್ರಾಜೆಕ್ಟ್ 75ರ ಅಡಿಯಲ್ಲಿ ಒಟ್ಟು ಆರು ಜಲಾಂತರ್ಗಾಮಿ ನೌಕೆಗಳು ನಿರ್ಮಾಣವಾಗಿದ್ದವು. ಈ ಪೈಕಿ ಐಎನ್‌ಎಸ್ ವಾಗ್ಶೀರ್ ಜಲಾಂತರ್ಗಾಮಿ ನೌಕೆ ಕೊನೆಯದಾಗಿದೆ. ಈ ನೌಕೆಯನ್ನು ಮುಂಬೈನ ಮಡಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಬುಧವಾರ ಲೋಕಾರ್ಪಣೆಗೊಳಿಸಿದ್ದು, ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಲೋಕಾರ್ಪಣೆ ಮಾಡಿದರು. ಇದು ನೌಕಾದಳದ ಸಾಮರ್ಥ್ಯವನ್ನು ಮತ್ತಷ್ಟು ವೃದ್ದಿಸಿದೆ.

ಹಿಂದೂ ಮಹಾಸಾಗರದ ಆಳ ಸಮುದ್ರದ ಪರಭಕ್ಷಕ ಸ್ಯಾಂಡ್‌ಫಿಶ್‌ನ ಹೆಸರನ್ನು ನೂತನವಾಗಿ ಲೋಕಾರ್ಪಣೆಗೊಂಡ ನೌಕೆಗೆ ಇಡಲಾಗಿದೆ.

vtv vitla
vtv vitla
- Advertisement -

Related news

error: Content is protected !!