Friday, July 11, 2025
spot_imgspot_img
spot_imgspot_img

ಮಂಗಳೂರು: ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಕೋವಿ ತಂದ ವ್ಯಕ್ತಿ ಅರೆಸ್ಟ್..!

- Advertisement -
- Advertisement -
vtv vitla
vtv vitla
vtv vitla

ಮಂಗಳೂರು: ಇಲ್ಲಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರವಾನಿಗೆ ಹೊಂದಿರದ ನಾಡಕೋವಿಯನ್ನು ತಂದಿದ್ದ ವ್ಯಕ್ತಿಯನ್ನು ಬಜಪೆ ಪೊಲೀಸರು ಬಂಧಿಸಿದ ಘಟನೆ ನ.30ರಂದು ನಡೆದಿದೆ. ಬಂಧಿತ ವ್ಯಕ್ತಿ ಬ್ರಹ್ಮಾವರ ಹಾವಂಜೆಯ ರೊನಾಲ್ಡ್ ಡಿ ಸೋಜಾ (24) ಎನ್ನಲಾಗಿದೆ.

vtv vitla

ರೊನಾಲ್ಡ್ ಡಿ ಸೋಜಾ ಅವರು ಮಂಗಳವಾರ ಸಂಜೆ ಏರ್ ಇಂಡಿಯಾ ವಿಮಾನದಲ್ಲಿ ಕುವೈತ್ ನಿಂದ ಬರುವ ಭಾವನನ್ನು ಕರೆದುಕೊಂಡು ಬರಲೆಂದು ಮಂಗಳೂರಿನ ಏರ್ ಪೋರ್ಟ್ ಗೆ ಬಂದಿದ್ದು, ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದರು.

ಈ ವೇಳೆ ವಿಮಾನ ನಿಲ್ದಾಣದ ಸಿಐಎಸ್ ಎಫ್ ಸಿಬ್ಬಂದಿ ಪರಿಶೀಲಿಸಿದಾಗ ಕಾರಿನಲ್ಲಿ ಎರಡು ನಾಡಕೋವಿಗಳು ಪತ್ತೆಯಾಗಿದ್ದು, ಪರವಾನಿಗೆ ಇಲ್ಲದ ಕೋವಿಯಾಗಿದೆ. ಈ ಬಗ್ಗೆ ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಿದೆ. ರೊನಾಲ್ಡ್ ಅವರು ಸೋಮವಾರ ಬೇಟೆಗೆ ಹೋಗಿದ್ದು, ಎರಡು ನಾಡ ಕೋವಿಯನ್ನು ಕಾರಿನಲ್ಲಿಯೇ ಇರಿಸಿಕೊಂಡಿದ್ದರು ಎನ್ನಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!