Sunday, June 7, 2026
spot_imgspot_img
spot_imgspot_img

ಮಂಗಳೂರು: ಗಾಂಧಿಯನ್ನು ಬಿಡಲಿಲ್ಲ, ಇನ್ನು ನಿಮ್ಮನ್ನು ಬಿಡ್ತೇವ ಎಂದು ಬೆದರಿಕೆ ಹಾಕಿದ ಧಮೇಂರ್ದ ಪ್ರಧಾನ್ ಅರೆಸ್ಟ್!

- Advertisement -
- Advertisement -

ಮಂಗಳೂರು: ಹಿಂದೂ ವಿರೋಧಿಯಾಗಿದ್ದ ಗಾಂಧೀಜಿಯನ್ನು ಬಿಡಲಿಲ್ಲ. ಇನ್ನು ನಿಮ್ಮನ್ನು ಬಿಡ್ತೇವ ಎಂದು ಸರಕಾರಕ್ಕೆ ಬೆದರಿಕೆ ಹಾಕಿದ ಆರೋಪದಲ್ಲಿ ಹಿಂದೂ ಮುಖಂಡ, ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧಮೇಂರ್ದ ಪ್ರಧಾನ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಧರ್ಮೇಂದ್ರ ಪ್ರಧಾನ್ ಅವರು ದೇವಸ್ಥಾನ ಧ್ವಂಸಮಾಡಿರುವ ಬಿಜೆಪಿ ಸರಕಾರದ ನಡೆಯನ್ನು ಖಂಡಿಸಿ ಆಕ್ರೋಶ ಭರಿತರಾಗಿ ಮಾತನಾಡುವ ವೇಳೆ ಗಾಂಧೀಜಿಯನ್ನು ನಾವು ಬಿಡಲಿಲ್ಲ ಇನ್ನು ನಿಮ್ಮನ್ನು ಬಿಡ್ತೇವ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇದು ಮುಖ್ಯಮಂತ್ರಿ ಗಳಿಗೆ ಕೊಲೆ ಬೆದರಿಕೆ ಎಂದು ವಿವಾದವಾಗಿತ್ತು .

ಈ ಹೇಳಿಕೆಯನ್ನು ವಿರೋಧಿಸಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಎಲ್ ಕೆ ಸುವರ್ಣ ಅವರು ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದಲ್ಲಿ ಇಂದು ಮಂಗಳೂರು ಪೊಲೀಸರು ಧರ್ಮೇಂದ್ರ ಅವರನ್ನು ಬಂಧಿಸಿದ್ದಾರೆ.

driving
- Advertisement -

Related news

error: Content is protected !!