Saturday, June 28, 2025
spot_imgspot_img
spot_imgspot_img

ಮಂಗಳೂರು: ಲಾಡ್ಜ್‌ನಲ್ಲಿ ದಂಪತಿಗಳ ಮೃತದೇಹ ನೇಣು ಬಿಗಿ ಸ್ಥಿತಿಯಲ್ಲಿ ಪತ್ತೆ..!!

- Advertisement -
- Advertisement -
vtv vitla

ಮಂಗಳೂರು: ಲಾಡ್ಜ್‌ವೊಂದರಲ್ಲಿ ದಂಪತಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರು ನಗರದ ಫಳ್ನೀರ್ ಖಾಸಗಿ ಹೋಟೇಲ್ ಲಾಡ್ಜ್‌ನಲ್ಲಿ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ದಂಪತಿಗಳನ್ನು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಭ ನಿವಾಸಿಗಳಾದ ರವೀಂದ್ರ (55) ಮತ್ತು ಸುಧಾ (50) ಎಂದು ಗುರುತಿಸಲಾಗಿದೆ.

ಫೆಬ್ರವರಿ 6ರಂದು ಮಂಗಳೂರಿಗೆ ಬಂದಿದ್ದ ದಂಪತಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಕಳೆದ 2 ದಿನಗಳಿಂದ ಹೊರ ಬಾರದ ಕಾರಣ ಲಾಡ್ಜ್ ಸಿಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಫ್ಯಾನಿಗೆ ಲುಂಗಿ ಹಾಕಿ ಒಂದೇ ಕುಣಿಕೆಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ತನಿಖೆಗೆ ಮಾರ್ಗದರ್ಶನ ಮಾಡಿದ್ದಾರೆ. ದಂಪತಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಮೃತರ ಬಳಿ ಸಿಕ್ಕಿರುವ ಆಧಾರ್ ಕಾರ್ಡ್ ಆಧಾರದಲ್ಲಿ ಇವರ ವಿಳಾಸ ಪತ್ತೆ ಹಚ್ಚಲಾಗಿದೆ. ಬಂದರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!