Thursday, August 27, 2026
spot_imgspot_img
spot_imgspot_img

ಮಂಗಳೂರು: ಸ್ಕಿಡ್ ಆಗಿ ಬಿದ್ದ ಆಕ್ಚಿವಾ; ಸವಾರನ ಮೇಲೆ ಕಾರು ಹರಿದು ಸ್ಥಳದಲ್ಲೇ ಮೃತ್ಯು..!!

- Advertisement -
- Advertisement -
vtv vitla

ಮಂಗಳೂರು : ಸ್ಕಿಡ್ ಆಗಿ ಬಿದ್ದ ಆಕ್ಚಿವಾ ಸ್ಕೂಟರ್ ಸವಾರನ ಮೇಲೆ ಕಾರೊಂದು ಹರಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು ನಗರದ ಕುಂಟಿಕಾನ ಬಳಿ ರಾತ್ರಿ ಸಂಭವಿಸಿದೆ.

ಕಾವೂರು ನಿವಾಸಿ ಕೌಶಿಕ್ (21) ಮೃತ ದುರ್ದೈವಿ. ಎಜೆ ಆಸ್ಪತ್ರೆಯಿಂದ ಕೌಶಿಕ್ ಸ್ಕೂಟರ್ ನಿಂದ ಬರುತ್ತಿರುವಾಗ ಆಟೋ ರಿಕ್ಷಾ ಕೌಶಿಕ್ ಸ್ಕೂಟರ್ ಗೆ ತಾಗಿದೆ, ಈ ವೇಳೆ ಕೌಶಿಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ

ಇದೇ ಸಂದರ್ಭ ಬಂದ ಕಾರೊಂದು ಕೌಶಿಕ್ ಮೇಲೆ ಹರಿದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳೂರು ಪೂರ್ವ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!