Tuesday, July 8, 2025
spot_imgspot_img
spot_imgspot_img

ಮದುವೆಯಾದ ಮರುದಿನವೇ ಗೆಳತಿಯೊಂದಿಗೆ ಪರಾರಿಯಾದ ವಧು!

- Advertisement -
- Advertisement -

ಕೇರಳ: ಮದುವೆಯಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗರ್ಲ್​ಫ್ರೆಂಡ್ ಜೊತೆ ಪರಾರಿಯಾಗಿರುವ ವಿಚಿತ್ರವಾದ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ತ್ರಿಶೂರ್​ನ ಮಹಿಳೆಯೊಬ್ಬರು ತಾನು ಮದುವೆಯಾದ ಮರುದಿನವೇ ಗಂಡನ ಮನೆಯಿಂದ ನಾಪತ್ತೆಯಾಗಿದ್ದಾರೆ. ಹೆಂಡತಿ ಕಾಣದ ಕಾರಣ ಆಕೆಯ ಗಂಡನಿಗೆ ಹೃದಯಾಘಾತ ಉಂಟಾಗಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಶೂರ್​ನ ಪಝುವಿಲ್​ನ 23 ವರ್ಷದ ಮಹಿಳೆ ಹೀಗೆ ತನ್ನ ಗೆಳತಿಯೊಂದಿಗೆ ಪರಾರಿಯಾದಾಕೆ.

ಹೆಂಡತಿ ಪರಾರಿಯಾಗಿರುವ ಬಗ್ಗೆ ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಆರು ದಿನ ತನಿಖೆ ಮಾಡಿದ ಪೊಲೀಸರಿಗೆ ಆಕೆ ತನ್ನ ಗೆಳತಿಯೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದೆ. ಆ ಮಹಿಳೆಯನ್ನು ಹುಡುಕಿ ಗಂಡನ ಮನೆಗೆ ಸೇರಿಸಲಾಗಿದ್ದು, ಆಕೆ ತನ್ನ ಮದುವೆಗೆ ಮೊದಲೇ ತನ್ನ ಗೆಳತಿಯೊಂದಿಗೆ ಓಡಿಹೋಗಲು ಬಯಸಿದ್ದಳು. ಆದರೆ, ಮನೆಯಲ್ಲಿ ತನ್ನ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಓಡಿಹೋಗಲು ನಿರ್ಧರಿಸಿದ್ದ ಆಕೆ ಅದಕ್ಕಾಗಿಯೇ ಮದುವೆಯಾಗಿದ್ದಳು ಎನ್ನಲಾಗಿದೆ.

ಮದುವೆಯಾದ ಮಾರನೇ ದಿನ ಬ್ಯಾಂಕ್​ಗೆ ಹೋಗಿದ್ದ ಆಕೆ ಗಂಡನ ಮೊಬೈಲ್ ತೆಗೆದುಕೊಂಡು ನನ್ನ ಗೆಳತಿಯನ್ನು ಭೇಟಿ ಮಾಡಿ ವಾಪಾಸ್ ಬರುತ್ತೇನೆಂದು ಹೇಳಿ ಹೋಗಿದ್ದಳು. ಆದರೆ, ಬೈಕ್​ನಲ್ಲಿ ಹೋದ ಆಕೆ ಮತ್ತೆ ವಾಪಾಸ್ ಬರಲೇ ಇಲ್ಲ ಎಂದು ಪತಿ ದೂರಿನಲ್ಲಿ ತಿಳಿಸಿದ್ದರು.

ತ್ರಿಶೂರ್​ನಿಂದ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕೆ ಆ ಮಹಿಳೆ ಚೆನ್ನೈಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ಆದರೆ, ಸಿಕ್ಕಿ ಬೀಳುತ್ತೇವೆಂಬ ಭಯದಿಂದ ಅವರಿಬ್ಬರೂ ಬಸ್ ಮೂಲಕ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಚೆನ್ನೈಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿಂದ ಹೋಟೆಲ್​ನಲ್ಲಿ ರೂಂ ಬುಕ್ ಮಾಡಿಕೊಂಡು ಇದ್ದರು.

ಅಂದಹಾಗೆ, ವಿಚಿತ್ರವೆಂದರೆ ಇನ್ನೊಬ್ಬ ಮಹಿಳೆ ಕೂಡ ಕೆಲವು ದಿನಗಳ ಹಿಂದಷ್ಟೆ ಮದುವೆಯಾಗಿದ್ದಳು. ಇಬ್ಬರೂ ನವವಿವಾಹಿತೆಯರು ಮದುವೆಗೆ ತಮಗೆ ಹಾಕಿದ್ದ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದರು. ಅವರನ್ನು ಮಧುರೈನಲ್ಲಿ ಪತ್ತೆಹಚ್ಚಲಾಗಿದೆ.

- Advertisement -

Related news

error: Content is protected !!