- Advertisement -
- Advertisement -
ಚಿತ್ರದುರ್ಗದಲ್ಲಿ ನಡೆದ ಪದವಿ ಪೂರ್ವ ವಿಭಾಗದ ರಾಜ್ಯ ಮಟ್ಟದ ಬೆಲ್ಟ್ ರೆಸ್ಲಿಂಗ್ (35ಕೆ.ಜಿ) ನಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವರ್ಷಿತಾ.ಡಿ ತೃತೀಯ ಸ್ಥಾನ ಪಡೆದಿದ್ದಾರೆ.

ಸಾಲೆತ್ತೂರು ಕೊಲ್ನಾಡು ಗ್ರಾಮದ ನಾಟೆಕಲ್ಲು ನಿವಾಸಿಯಾದ ಲೀಲಾವತಿ ಹಾಗೂ ಡೀಕಯ್ಯ ದಂಪತಿಗಳ ಪುತ್ರಿಯಾದ ಈಕೆ ಸಾಲೆತ್ತೂರು ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ರಾಘವೇಂದ್ರರವರ ತರಬೇತಿ ಹಾಗೂ ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ ಗೌಡ ಇವರಿಂದ ಮಾರ್ಗದರ್ಶನ ಪಡೆದಿದ್ದಾರೆ.

ಇವಳಿಗೆ ವಿಠಲ ಎಜುಕೇಶನ್ ಸೊಸೈಟಿ, ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
- Advertisement -