Sunday, July 6, 2025
spot_imgspot_img
spot_imgspot_img

ವಿಟ್ಲ: ಹುಲಿವೇಷ ನರ್ತಕ ‘ಪಿಲಿ ಕಿಟ್ಟಣ್ಣ’ ವಿಧಿವಶ!

- Advertisement -
- Advertisement -

ವಿಟ್ಲ: ಕಳೆದ 53 ವರ್ಷದಿಂದ ದಸರಾ ಸಮಯದಲ್ಲಿ ಹುಲಿವೇಷ ಧರಿಸಿ ವಿಟ್ಲ, ಪುತ್ತೂರು ಭಾಗದ ಜನರನ್ನು ರಂಜಿಸುತ್ತಿದ್ದ, ತನ್ನದೇ ಆದ ಹುಲಿ ತಂಡದ ಮೂಲಕ ವಿಶೇಷ ಶೈಲಿಯ ನರ್ತನದ ಮೂಲಕ ಮನೆಮಾತಾಗಿದ್ದ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಹುಲಿವೇಷ ನರ್ತಕ ‘ಪಿಲಿ ಕಿಟ್ಟಣ್ಣ’ ಅಲ್ಪ ಸಮಯದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.

ವಿಟ್ಲ ದೇವತಾ ಸಮಿತಿಯ ಶಾರದೋತ್ಸವದ ಪ್ರಾರಂಭದ ಮೆರವಣಿಗೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಸಕ್ರಿಯವಾಗಿ ತನ್ನ ತಂಡದೊಂದಿಗೆ ಭಾಗವಹಿಸುತ್ತಿದ್ದ ಅಪ್ಪಟ ದೈವಾಭಿಮಾನಿ, ಹುಲಿವೇಷ ನರ್ತಕ ‘ಪಿಲಿ ಕಿಟ್ಟಣ್ಣ’ ಅಲ್ಪ ಸಮಯದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಇವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು.

- Advertisement -

Related news

error: Content is protected !!