- Advertisement -
- Advertisement -


ಸಾಮಾಜಿಕ ಜಾಲತಾಣ ‘ಕೂ’ವಿನಲ್ಲಿ ನಟಿ ಲಾರಾ ದತ್ತಾ ಹೂವು ಮತ್ತು ಗಿಡಗಳ ನಡುವೆ ಇರುವ ಫೋಟೋವನ್ನು ಶೇರ್ ಮಾಡಿದ್ದರು. ಇದಕ್ಕೆ ನೆಟ್ಟಿಗರೊಬ್ಬರು ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಕುಟುಂಬದ ಜೊತೆ ಪ್ರವಾಸ ಕೈಕೊಂಡಿರುವ ನಟಿ ಲಾರಾ ದತ್ತಾ, ‘ಸುಂದರ ತಾಣಗಳಲ್ಲಿ ಕುಟುಂಬದವರ ಜೊತೆ ನಾವು ಕೆಲ ಸಮಯ ಕಳೆಯಬೇಕು’ ಎಂದು ಬರೆದುಕೊಂಡು ಫೋಟೊವನ್ನು ಹಂಚಿಕೊ0ಡಿದ್ದರು. ಲಾರಾ ದತ್ತಾ ಅವರ ಈ ಪೋಸ್ಟ್ಗೆ ಸಾಕಷ್ಟು ಜನ ಕಮೆಂಟ್ ಗಳನ್ನು ಮಾಡಿದ್ದಾರೆ.


2000 ಮಿಸ್ ಯುನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಇವರು ನಂತರ ಬಾಲಿವುಡ್ ಅಂಗಳದಲ್ಲಿ ಮಿಂಚಿದ್ದರು. ಈ ವರ್ಷ ಅಕ್ಷಯ್ ಕುಮಾರ್ ನಟನೆಯ ಬೆಲ್ ಬಾಟಂ ಚಿತ್ರದಲ್ಲಿ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಇಂದಿರಾ ಗಾಂಧಿ ಮೇಕಪ್ ವಿಡಿಯೊ ವೈರಲ್ ಆಗಿತ್ತು. ಈ ಪಾತ್ರಕ್ಕೆ ಕುಟುಂಬದವರು ಸೇರಿದಂತೆ, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.




- Advertisement -