Thursday, July 30, 2026
spot_imgspot_img
spot_imgspot_img

ಸುಳ್ಯ: ಮಗುವಿಗೆ ಚಿಕಿತ್ಸೆ ಕೊಡಿಸಿ ವಾಪಸ್ಸಾಗುತ್ತಿದ್ದ ವೇಳೆ ರಿಕ್ಷಾ ಅಪಘಾತ; ಒಂದು ತಿಂಗಳ ಹಸುಳೆ ದಾರುಣ ಸಾವು

- Advertisement -
- Advertisement -
vtv vitla
vtv vitla

ಸುಳ್ಯ: ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿ ವಾಪಸ್ಸಾಗುವಾಗ ಅಪಘಾತಕ್ಕೆ ಸಿಲುಕಿ ಒಂದು ತಿಂಗಳ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯದ ಬೇಂಗಮಲೆ ಎಂಬಲ್ಲಿ ಜ.7ರಂದು ತಡ ರಾತ್ರಿ ಸಂಭವಿಸಿದೆ.

ಕಲ್ಮಡ್ಕದ ಮಗುವಿಗೆ ಶುಕ್ರವಾರ ಸಂಜೆ ಅನಾರೋಗ್ಯ ಕಾಣಿಸಿಕೊಂಡಿದ್ದು ಚಿಕಿತ್ಸೆಗಾಗಿ ಆಟೋ ರಿಕ್ಷಾವೊಂದರಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಕೊಡಿಸಿದ ಬಳಿಕ ಆದೇ ರಿಕ್ಷಾದಲ್ಲಿ ಮರಳಿ ಮನೆಗೆ ಹೊರಟಿದ್ದಾರೆ. ಈ ವೇಳೆ ಬೇಂಗಮಲೆ ಎಂಬಲ್ಲಿ ತಲುಪುವಾಗ ಆಟೋ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಮಗು ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

vtv vitla
vtv vitla
- Advertisement -

Related news

error: Content is protected !!