Wednesday, August 19, 2026
spot_imgspot_img
spot_imgspot_img

ಸ್ನಾನಕ್ಕೆಂದು  ಕೊಳಕ್ಕೆ ಇಳಿದ ಯುವಕ ನೀರುಪಾಲು

- Advertisement -
- Advertisement -

ಸ್ನೇಹಿತರ ಜೊತೆ ಸ್ನಾನಕ್ಕೆಂದು  ಕೊಳಕ್ಕೆ ಇಳಿದಾಗ ಯುವಕನೋರ್ವ ನೀರುಪಾಲಾಗಿದ್ದಾನೆ.ಈ ಘಟನೆ ಕೆಳಗಿನ ತಲಪಾಡಿ ಬಳಿ ನಡೆದಿದೆ.

ತಲಪಾಡಿಯಲ್ಲಿರುವ ಖಾಸಗಿ ಜಾಗದಲ್ಲಿರುವ ಕೊಳಕ್ಕೆ ಸ್ನಾನಕ್ಕೆಂದು ಬಂದಿದ್ದ ನಾಲ್ವರ ಪೈಕಿ ಹರಿಪ್ರಸಾದ್‌ ನೀರಿನಡಿಯ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾರೆ. ಇದರಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ ದಿ. ಸುಬ್ರಾಯ ಆಚಾರ್ಯ-ಉಮಾವತಿ ದಂಪತಿ ಪುತ್ರ ಹರಿಪ್ರಸಾದ್‌ ಆಚಾರ್ಯ(36) ಮೃತರು.

ಘಟನಾ ಸ್ಥಳಕ್ಕೆ ಮಂಗಳೂರಿನಿಂದ ಅಗ್ನಿ ಶಾಮಕ ದಳದವರು ಭೇಟಿ ನೀಡಿದ್ದು, ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತರು ವೆಲ್ಡಿಂಗ್‌ ವೃತ್ತಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!