Saturday, June 28, 2025
spot_imgspot_img
spot_imgspot_img

ಹೊಸ ಅವತಾರದಲ್ಲಿ ತೆರೆಗೆ ಎಂಟ್ರಿಕೊಡಲಿದ್ದಾರೆ ಬಾಲಿವುಡ್‌ ನಟಿ ಸನ್ನಿ ಲಿಯೋನ್‌..!

- Advertisement -
- Advertisement -
astr

ಬಳುಕುವ ಬಳ್ಳಿ, ಚೆಂದುಳ್ಳಿ ಚೆಲುವೆ, ಸಿನೆಮಾ ರಂಗದಲ್ಲಿ ಮಿಂಚುತ್ತಿರುವ ಬ್ಯೂಟಿ ಕ್ವೀನ್ ಸನ್ನಿ ಲಿಯೋನ್‌ ಸದಾ ಹಾಟ್ ಪಾತ್ರಗಳಿಂದಲೇ ಪಡ್ಡೆ ಹುಡುಗರ ಹೃದಯ ಕದ್ದವರು. ಚಾಂಪಿಯನ್ ಎಂಬ ಕನ್ನಡ ಸಿನೆಮಾದಲ್ಲಿ ಈಗಾಗಲೇ ಸನ್ನಿಲಿಯೋನ್ ಡಿಂಗರ್‍ ಬಿಲ್ಲಿ ಎಂಬ ಹಾಡಿಗೆ ಹಜ್ಜೆ ಹಾಕಿದ್ದು ಇದರ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ.

ಸ್ಕ್ರೀನ್ ಮೇಲೆ ಸದಾ ಹಾಟ್ ಆಗಿ ಕಾಣಿಸುವ ಸನ್ನಿ ಲಿಯೋನ್ ಈಗ ಮತ್ತೊಂದು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿದೆ.

ಬಾಲಿವುಡ್‌ ನಟಿ ಸನ್ನಿ ಲಿಯೋನಿ ತಮಿಳಿನ “ಓ ಮೈ ಗೋಸ್ಟ್‌’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮಾಯಸೇನಾ ಹೆಸರಿನ ದೆವ್ವವಾಗಿ ಅವರು ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದು, ಆ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ದೆವ್ವದ ಭಯದ ಜತೆ ಹಾಸ್ಯವೂ ಸೇರಿರಲಿದೆ ಎಂದಿದ್ದಾರೆ ನಿರ್ದೇಶಕ ಯುವನ್‌. ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ಜತೆಯಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌, ಯೋಗಿ ಬಾಬು, ರಾಜ್‌ಪಾಲ್‌ ಯಾದವ್‌ ಸೇರಿ ಅನೇಕರು ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

- Advertisement -

Related news

error: Content is protected !!