Tuesday, July 1, 2025
spot_imgspot_img
spot_imgspot_img

ಹೊಸ ವರ್ಷಾಚರಣೆ, ಕ್ರಿಸ್​ಮಸ್​ ಆಚರಣೆಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ಈ ಬಾರಿಯೂ ಬಹಿರಂಗವಾಗಿ ನ್ಯೂಇಯರ್ ಸೆಲೆಬ್ರೇಷನ್ ಗೆ ಬ್ರೇಕ್..!

- Advertisement -
- Advertisement -

ಕೊರೊನಾ ವೈರಸ್‌ನ ಆತಂಕದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೊಸ ವರ್ಷಾಚರಣೆ ಹಾಗೂ ಕ್ರಿಸ್ ಮಸ್ ಆಚರಣೆಗೆ ಅವಕಾಶ ನೀಡಲಾಗುತ್ತಿದೆ, ಆದರೆ ಬಹಿರಂಗವಾಗಿ ಹೊಸ ವರ್ಷ ಆಚರಣೆಗೆ ಹಾಗೂ ರಾಜ್ಯಾದ್ಯಂತ ಬಾರ್, ಪಬ್ ಗಳಲ್ಲಿ ಡಿಜೆಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿ. 30 ರಿಂದ ಜ.2 ರವರೆಗೆ ಈ ಹೊಸ ರೂಲ್ಸ್ ಜಾರಿಯಲ್ಲಿಇರಲಿದೆ. ಹೊಸವರ್ಷದ ಸಂಭ್ರಮಾಚರಣೆಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ. ಆದರೆ ಕ್ರಿಸ್​ಮಸ್​ ಹಬ್ಬದಲ್ಲಿ ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ನಿರ್ಬಂಧಗಳು ಇಲ್ಲ ಎಂದರು.

vtv vitla
vtv vitla

ಈಗಿನ ಪರಿಸ್ಥಿತಿ ಅನುಸಾರ ತಜ್ಞರ ಶಿಫಾರಸ್ಸಿನಂತೆ , ಶೇ.50ರ ಮಿತಿಯನ್ನು ಜಾರಿಗೊಳಿಸಲಾಗಿದೆ ಬಹಿರಂಗವಾಗಿ ಜನರು ಗುಂಪುಗೂಡಲು ನಿರ್ಬಂಧಿಸಲಾಗಿದೆ. ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಡಿಜೆ ಸೇರಿ ಅಪಾರ್ಮೆಂಟ್ ಗಳಲ್ಲೂ ಡಿಜೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಪಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್​ಗಳಲ್ಲಿ ಅರ್ಧದಷ್ಟು ಜನರಿಗೆ ಸೇವೆ ಒದಗಿಸಬಹುದುದಾಗಿದೆ ಎಂದು ಹೇಳಿದರು.

ಕ್ರಿಸ್ ಮಸ್ ಸಂದರ್ಭದಲ್ಲಿ ಕೊರೋನಾ ಮುಂಜಾಗ್ರತಾ ಕ್ರಮದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಚರಿಸಬೇಕು ಎಂದು ಮನವಿ ಮಾಡಿದರು.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!