Tuesday, May 30, 2023
spot_imgspot_img
spot_imgspot_img

ಅತೀಕ್ ಹತ್ಯೆಯ ದ್ವೇಷ ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ನಡೆಸ್ತೇವೆ: ಅಲ್ ಖೈದಾ

- Advertisement -G L Acharya
vtv vitla
- Advertisement -

ನವದೆಹಲಿ: ಗ್ಯಾಂಗ್‍ಸ್ಟರ್ ಹಾಗೂ ರಾಜಕಾರಣಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಆಶ್ರಫ್ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಭಾರತದ ಮೇಲೆ ದಾಳಿ ನಡೆಸುವುದಾಗಿ ಅಲ್ ಖೈದಾ ಬೆದರಿಕೆ ಹಾಕಿದೆ.

ಅಲ್ ಖೈದಾ ಉಗ್ರ ಸಂಘಟನೆಯು ಅಸ್-ಸಾಹಬ್ ಬಿಡುಗಡೆ ಮಾಡಿದ 7 ಪುಟಗಳ ನಿಯತಕಾಲಿಕದಲ್ಲಿ ಈ ಸಂದೇಶವನ್ನು ಕಳುಹಿಸಿದೆ. ಈ ವೇಳೆ ಅಲ್‍ಖೈದಾ ಈದ್ ಸಂದೇಶವನ್ನು ಕಳಿಸಿ, ಎಲ್ಲರಿಗೂ ಶುಭಕೋರಿದೆ. ಅಷ್ಟೇ ಅಲ್ಲದೇ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಆಶ್ರಫ್‍ನನ್ನು ಹುತಾತ್ಮರು ಎಂದು ಕರೆದಿದೆ. ಅಷ್ಟೇ ಅಲ್ಲದೇ ಅತೀಕ್‍ನನ್ನು ಪ್ರಶಂಸಿಸಿದೆ. ಇದೇ ವೇಳೆ ಮುಸ್ಲಿಮರಿಗೆ ಸ್ವತಂತ್ರವನ್ನು ಕೊಡಿಸುವುದಾಗಿ ಭರವಸೆಯನ್ನು ನೀಡಿದೆ.

ಅತೀಕ್‍ಗೆ ಹಲವು ಉಗ್ರ ಸಂಘಟನೆ ಹಾಗೂ ಪಾಕ್ ಗುಪ್ತಚರ ಇಲಾಖೆಯ ಜೊತೆಗೆ ನಂಟಿದೆ ಎಂದು ಇತ್ತೀಚೆಗೆ ಕೋರ್ಟ್‍ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿತ್ತು.

ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಪತ್ರಕರ್ತರ ಸೋಗಿನಲ್ಲಿ ಬಂದು ಏಪ್ರಿಲ್ 16ರಂದು ಪ್ರಯಾಗ್‌ರಾಜ್‍ನಲ್ಲಿ ಗುಂಡು ಹಾರಿಸಿದ್ದರು. ಅತೀಕ್ ಮತ್ತು ಆತನ ಸಹೋದರನನ್ನು ಸಂದರ್ಶಿಸಲು ಬಂದಿದ್ದ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

- Advertisement -

Related news

error: Content is protected !!