- Advertisement -
- Advertisement -




ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ದೀಪಾವಳಿ ಬಹಳ ವಿಶೇಷವಾಗಿದ್ದು, ದೀಪೋತ್ಸವದಲ್ಲಿ 36 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ.
ರಾಮ-ಸೀತಾ ಹಾಗೂ ಲಕ್ಷ್ಮಣ 14 ವರ್ಷಗಳ ವನವಾಸ ಮುಗಿಸಿ ಅಯೋದ್ಯೆಗೆ ಮರಳುವ ಸಂಭ್ರಮದ ದಿನದಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ವನವಾಸ ಮುಗಿಸಿ ಶ್ರೀ ರಾಮ ರಾಜ್ಯಕ್ಕೆ ವಿಜಯಶಾಲಿಯಾಗಿ ಮರಳಿದ ದಿನವನ್ನು ಅಯೋಧ್ಯೆಯಲ್ಲಿ 36 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಸಂಭ್ರಮಿಸಲಾಗಿದೆ.
ಸರಯೂ ನದಿಯ ತೀರದಲ್ಲಿರುವ 56 ಘಾಟ್ಗಳಲ್ಲಿ 30 ಲಕ್ಷ(3 ಮಿಲಿಯನ್) ಮಣ್ಣಿನ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸುವ ಮೂಲಕ ಹೊಸ ಗಿನ್ನಿಸ್ ದಾಖಲೆ ಬರೆಯಲಾಗಿದೆ.
ಉಪ ರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಮತ್ತು ಯುಪಿ ಗವರ್ನರ್ ಆನಂದಿಬೆನ್ ಪಟೇಲ್ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಆರತಿ ಮಾಡುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು ಎಂದು ತಿಳಿದುಬಂದಿದೆ.
- Advertisement -








