



ಅನಂತಾಡಿ : ಅನಂತಾಡಿ ಕ್ರಿಕೆಟ್ ಕ್ಲಬ್ (ರಿ.)ಅನಂತಾಡಿ ಇದರ ಆಶ್ರಯದಲ್ಲಿ ದೀಪಾವಳಿಯ ಪ್ರಯುಕ್ತ ಸಾರ್ವಜನಿಕ ಮುಕ್ತ “ಆತ್ಮೀಯ ಕ್ರೀಡಾಕೂಟ “ಬಹಳ ಸಂಭ್ರಮ, ಸಡಗರದಿಂದ ನವೆಂಬರ್ 3 ರಂದು ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆ ಯನ್ನು ಗ್ರಾಮಪಂಚಾಯಿತ್ ನ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಸುರೇಶ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆ, ನೇರಳಕಟ್ಟೆ ವ್ಯ. ಸೇ. ಸ. ಸಂಘದ ವ್ಯವಸ್ಥಾಪಕರಾದ ಶ್ರೀಮತಿ ಯಶೋದಾ, ಪುತ್ತೂರು ಬಜಾಜ್ ಶೋ ರೂಮ್ ನ ವ್ಯವಸ್ಥಾಪಕ ಅಮರನಾಥ್, SDMC ಅಧ್ಯಕ್ಷ ವಿವೇಕಾನಂದ ಶೆಟ್ಟಿ, ಕ್ಲಬ್ ನ ಅಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಸಡಗರ ಸಂಭ್ರಮದ ಸಮಯದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬಿ. ಜೆ. ಪಿ. ಮುಖಂಡ ಮಾಧವ ಮಾವೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಯಂತಿ ವಿ. ಪೂಜಾರಿ, ರೈತ ಮೋರ್ಚಾ ಬಂಟ್ವಾಳ ಅಧ್ಯಕ್ಷ ಸನತ್ ಕುಮಾರ್ ರೈ ತುಂಬೆಕೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಸದಸ್ಯರಾದ ಶ್ರೀಮತಿ ಗೀತಾ ಚಂದ್ರಶೇಖರ, ಹಿಂದೂ ಮುಖಂಡ ಪುನೀತ್ ಕೆರೇಹಳ್ಳಿ ಹಾಗೂ ಇನ್ನಿತರ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಕ್ರೀಡಾಕೂಟದುದ್ದಕ್ಕೂ ಮಕ್ಕಳು, ಬಾಲಕ ಬಾಲಕಿಯರು,ಯುವ ಕ ಯುವತಿಯರು, ಮಹಿಳೆಯರು ಭಾಗವಹಿಸಿ ಸಂಭ್ರಮಾಚರಿಸಿದರು.