ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಈ ಧಾರಾವಾಹಿಯಲ್ಲಿ ಇಡೀ ಕಥೆ ಸುತ್ತುವುದೇ ಆರ್ಯವರ್ಧನ್ ಎನ್ನುವ ಕ್ಯಾರೆಕ್ಟರ್ ಮೇಲೆ. ಈ ಪಾತ್ರ ನಿರ್ವಹಿಸುತ್ತಾ ಇರುವವರು ಖ್ಯಾತ ನಟ, ಸಾಹಸಸಿಂಹ ವಿಷ್ಣು ವರ್ಧನ್ ಅವರ ಅಳಿಯ ಅನಿರುದ್ಧ್ ಜತ್ಕರ್. ಆದ್ರೆ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ ನೀಡಿದ್ದಾರೆ. ಯಾರು ಅನಿರುದ್ಧ್ ಪಾತ್ರ ನಿರ್ವಹಿಸುತ್ತಾರೆ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಅನಿರುದ್ಧ್ ಬದಲು ಹರೀಶ್ ರಾಜ್!
ನಟ ಅನಿರುದ್ಧ್ ಅವರು ಜೊತೆಜೊತೆಯಲಿ ಸೀರಿಯಲ್ನಿಂದ ಹೊರ ಹೋದ ಬಳಿಕ ಯಾರು ಸೀರಿಯಲ್ನ ಮುಂದಿನ ಹೀರೋ ಅನ್ನೋ ಪ್ರಶ್ನೆ ಹುಟ್ಟಿತ್ತು. ಆರೂರ್ ಜಗದೀಶ್ ಅವರು ಮೊದಲೇ ನಾಯಕನನ್ನು ಆಯ್ಕೆ ಮಾಡಿಕೊಂಡು ಅನಿರುದ್ಧ್ಗೆ ಗೇಟ್ ಪಾಸ್ ಕೊಟ್ಟಿದ್ದಾರಾ? ಅನ್ನೋ ಪ್ರಶ್ನೆ ಹುಟ್ಟಿತ್ತು. ಇದೀಗ ಎಲ್ಲಾ ಗೊಂದಲಕ್ಕೂ ತೆರೆ ಬಿದ್ದಿದ್ದು ಸ್ಯಾಂಡಲ್ವುಡ್ ನಟ ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆರೂರು ಜಗದೀಶ್ ಅವರು ಅಳೆದು ತೂಗಿಯೇ ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ರನ್ನು ಆಯ್ಕೆ ಮಾಡಿದ್ದಾರೆ. ಹರೀಶ್ ರಾಜ್ ಕೂಡ ಉತ್ತಮ ಕಲಾವಿದರಾಗಿದ್ದಾರೆ. ಆರ್ಯವರ್ಧನ್ ಪಾತ್ರವನ್ನು ಅಚ್ಚುಕಟ್ಟಾಗಿಯೇ ನಿಭಾಯಿಸೋ ಸಾಮರ್ಥ್ಯ ಹೊಂದಿದ್ದಾರೆ.
ಅನು ಸಿರಿಮನೆ ಹಾಗೂ ಆರ್ಯವರ್ಧನ್ ಜೋಡಿ ಪ್ರೇಕ್ಷಕರ ಮನಗೆದ್ದ ಜೋಡಿಯಾಗಿತ್ತು. ಇದೀಗ ಪಾತ್ರದ ಬದಲಾವಣೆಯನ್ನು ಜನರು ಹೇಗೆ ಸ್ವೀಕರಿಸ್ತಾರೆ ಅನ್ನೋದನ್ನೂ ಕಾದು ನೋಡಬೇಕಿದೆ. ಇತ್ತ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಅವರೇ ಬೇಕು ಎಂದು ಮಹಿಳಾ ಅಭಿಮಾನಿಗಳು ಆಗ್ರಹಿಸಿದ್ದಾರೆ. ಆರೂರು ಜಗದೀಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳು ಕಿಡಿಕಾರಿದ್ದಾರೆ. ಅನಿರುದ್ಧ್ ಅವರನ್ನೇ ಆರ್ಯವರ್ಧನ್ ಪಾತ್ರಕ್ಕೆ ಕರೆತನ್ನಿ ಎನ್ನುವ ಕೂಗು ಜೋರಾಗಿತ್ತು.