- Advertisement -
- Advertisement -



ಕೇರಳ : ಕೋಝೀಕ್ಕೋಡ್ ಅಪಾರ್ಟ್ಮೆಂಟ್ನಲ್ಲಿ ಯುವ ವೈದ್ಯೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ವಯನಾಡ್ನ ಕಾನಿಯಂಬಟ್ಟ ನಿವಾಸಿ 25 ವರ್ಷದ ತನ್ಸಿಯಾ ಮೃತ ಮಹಿಳೆಯಾಗಿದ್ದಾಳೆ.
ತನ್ಸಿಯಾ ಕೋಝಿಕೋಡ್ ನ ಮಲಬಾರ್ ವೈದ್ಯಕೀಯ ಕಾಲೇಜಿನ ಪಿಜಿ ವಿದ್ಯಾರ್ಥಿನಿಯಾಗಿದ್ದಳು. ಪಲಾಝಿಯ ತನ್ನ ಸ್ನೇಹಿತೆಯ ಫ್ಲಾಟ್ ನಲ್ಲಿ ತನ್ಸಿಯಾ ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಫ್ಲಾಟಿಗೆ ತೆರಳಿದಾಗ ಮೃತ ಸ್ಥಿತಿಯಲ್ಲಿ ತಾನ್ಸಿಯಾ ಪತ್ತೆಯಾಗಿದ್ದಾಳೆ. ಮೃತ ದೇಹವನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
- Advertisement -