Wednesday, May 1, 2024
spot_imgspot_img
spot_imgspot_img

ಪುತ್ತೂರು: ಕೋಳಿ ಫಾರಂ ತ್ಯಾಜ್ಯ ಗುಂಡಿಯ ಕಾಮಗಾರಿಯ ವೇಳೆ ಮಣ್ಣಿನಡಿ ಹೂತು ಹೋದ ಕಾರ್ಮಿಕರು – ಓರ್ವನ ಮೃತ ದೇಹ ಪತ್ತೆ !

- Advertisement -G L Acharya panikkar
- Advertisement -

ಪುತ್ತೂರು: ಕೋಳಿ ಫಾರಂ ಒಂದಕ್ಕೆ ಸಂಬಂಧಿಸಿದ ತ್ಯಾಜ್ಯ ಗುಂಡಿಯ ಕಾಮಗಾರಿಯ ವೇಳೆ ಇಬ್ಬರು ಗುಂಡಿಯಲ್ಲಿ ಮಣ್ಣಿನಡಿ ಹೂತು ಹೋದ ದುರ್ಘಟನೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ‌ ಕಡಮಾಜೆ ಎಂಬಲ್ಲಿ ಸಂಭವಿಸಿದೆ.

ಕೂಲಿ ಕಾರ್ಮಿಕರಾದ ಸ್ಥಳೀಯ ನಿವಾಸಿಗಳಾದ ರವಿ ಮತ್ತು ಬಾಬು ಮಣ್ಣಿನಡಿ ಸಿಲುಕಿ ಹಾಕಿಕೊಂಡವರು. ಇಬ್ಬರಿಗೆ ಸುಮಾರು 35-40 ವರ್ಷ ಪ್ರಾಯ ಎಂದು ತಿಳಿದು ಬಂದಿದೆ‌ ಇದರಲ್ಲಿ ಒಬ್ಬರ ಮೃತ ದೇಹವನ್ನು ಮೇಲಕ್ಕೆ ಎತ್ತಲಾಗಿದ್ದೂ ಇನ್ನೊಬ್ಬರಿಗಾಗಿ ಶೋಧ ಕಾರ್ಯಚರಣೆ ಮುಂದುವರಿದಿದೆ.

ಪಾಣಾಜೆ ಗ್ರಾಮದ‌ ಕೋಟೆ ರಸ್ತೆಯ ಕೆಮಾಜೆ ಎಂಬಲ್ಲಿ ಅಬ್ದುಲ್ ಕಡಮನೆಯವರ ಪುತ್ರ ಷರೀಫ್ ಕಡಮಾಜೆ ಅವರಿಗೆ ಸೇರಿದ ಜಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ.ಕೋಳಿ ಫಾರ್ಮ್ ನ ತ್ಯಾಜ್ಯ ಎಸೆಯಲು ಸುಮಾರು 15 ಅಡಿ ಆಳದ ಗುಂಡಿ ಕಳೆದ ಹದಿನೈದು ವರ್ಷಗಳಿಂದ ಇದ್ದು ಅದಕ್ಕೆ ಇತ್ತಿಚೆಗೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸಲಾಗಿತ್ತು. ನಿನ್ನೆ ಗುಂಡಿಯ ಪಕ್ಕ ಜೆಸಿಬಿಯಲ್ಲಿ ಮಣ್ಣಿನ ಕಾಮಾಗಾರಿ ನಡೆಸಲಾಗಿತ್ತು.

ಇಂದು ಆ ತ್ಯಾಜ್ಯದ ಗುಂಡಿಗೆ ಪೈಪ್ ಅಳವಡಿಸಲು ಸ್ಲ್ಯಾಬ್ ಮೇಲೆ ಬಾಬು ಮತ್ತು ರವಿ ಎಂಬ ಇಬ್ಬರು ಕಾರ್ಮಿಕರು ನಿರತರಾಗಿದ್ದಾಗ ಸ್ಲ್ಯಾಬ್ ಕುಸಿದು ಗುಂಡಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಆಗ ಸುತ್ತ ಜೆಸಿಬಿ ಮಣ್ಣು ಅಗೆದು ಹಾಕಿದ್ದ ಮಣ್ಣು ಗುಂಡಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!