Friday, August 19, 2022
spot_imgspot_img
spot_imgspot_img

ಅಪ್ರಾಪ್ತೆಯ ಲವ್ ಕಂ ಕಿಡ್ನಾಪ್.! ಹುಡುಕಿಕೊಟ್ಟವರಿಗೆ 50 ಸಾವಿರ; ಏನಿದೂ ವಿಚಿತ್ರ ಪ್ರೇಮ ಕಹಾನಿ.!!

- Advertisement -G L Acharya G L Acharya
- Advertisement -

ಅಪ್ರಾಪ್ತೆಯನ್ನು ಕರೆದುಕೊಂಡು ಕಾಲ್ಕಿತ್ತ ಪ್ರೇಮಿ. ಎಂಟು ತಿಂಗಳಾದರು ಪತ್ತೆಯಾಗದ ಪ್ರೇಮಿಗಳು. ಅಪ್ರಾಪ್ತೆಯ ಲವ್ ಕಂ ಕಿಡ್ನಾಪ್ ಸ್ಟೋರಿ.!. ಪ್ರೇಮಿಗಳ ಚೆಲ್ಲಾಟ, ಹೆತ್ತವರ ಸಂಕಟ, ಪೊಲೀಸರಿಗೆ ಚಳ್ಳೆಹಣ್ಣು.? ಏನಿದೂ ವಿಚಿತ್ರ ಕಹಾನಿ.!!

ಲಿಂಗರಾಜು ಅಲಿಯಾಸ್ ವಿರಾಟ್ ಎಂಬಾತ ಅಪ್ರಾಪ್ತೆಯನ್ನು ಕರೆದುಕೊಂಡು ಓಡಿಹೋಗಿ ಎಂಟು ತಿಂಗಳು ಕಳೆದಿವೆ. ಲಿಂಗರಾಜುವಿಗಾಗಿ ಪೊಲೀಸರು ಸತತವಾಗಿ ಹುಡುಕಾಟವನ್ನು ನಡೆಸಿದರು ಆತ ಮಾತ್ರ ಸಿಕ್ಕಿಬೀಳುತ್ತಿಲ್ಲ. ಬೇರೆ ಬೇರೆ ಊರು ಬೇರೆ ಬೇರೆ ಫೋನ್ ನಿಂದ ಅಪ್ರಾಪ್ತೆಯ ಪೋಷಕರಿಗೆ ಕರೆಯನ್ನು ಮಾಡಿಸಿ ಅಲ್ಲಿಂದ ಪರಾರಿಯಾಗುತ್ತಿದ್ದು. ಲಿಂಗರಾಜು ಪತ್ತೆಗಾಗಿ ಶಿವಮೊಗ್ಗದ ಮಹಿಳಾ ಪೊಲೀಸರು ನಗದು ಬಹುಮಾನ ಘೋಷಿಸಿದ್ದಾರೆ. ಹಿಡಿದುಕೊಟ್ಟವರಿಗೆ 50 ಸಾವಿರ ನಗದನ್ನು ನೀಡುವುದಾಗಿ ಶಿವಮೊಗ್ಗ ಪೊಲೀಸರು ಘೋಷಿಸಿದ್ದಾರೆ.

ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿರುವ ಲಿಂಗರಾಜು ಬೇರೆ ಬೇರೆ ಸ್ಥಳಗಳಿಗೆ ಹೋದಾಗ ದಾರಿಹೋಕರ ಬಳಿಯಲ್ಲಿ ಮೊಬೈಲ್ ಪಡೆದು ಅಪ್ರಾಪ್ತೆಯ ಪೋಷಕರಿಗೆ ಕರೆ ಮಾಡಿಸಿದ್ದಾನೆ. ಆ ಮೊಬೈಲ್ ಜಾಡು ಹಿಡಿದು ಹೋದ ಪೊಲೀಸರಿಗೆ ತರಕಾರಿ ಮಾರುವವರೋ ಅಥವಾ ಇನ್ಯಾರೋ ಸಿಗುತ್ತಾರೆ. ಆದರೆ ಅವರಿಗೂ ಅಪ್ರಾಪ್ತೆಗೂ ಪರಿಚಯವೇ ಇರುವುದಿಲ್ಲ. ಇದರಿಂದ ಹೈರಾಣಾಗಿರುವ ಪೊಲೀಸರು ಆರೋಪಿಯ ಫೋಟೋವನ್ನು ಎಲ್ಲೆಡೆ ಹಂಚಿದ್ದಾರೆ. ವಾಟ್ಸ್‌ಆಪ್ ನಲ್ಲಿ ಫೋಟೋ ಶೇರ್ ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ. ಆದರೂ ಆರೋಪಿ ಮಾತ್ರ ಪತ್ತೆಯಾಗಿಲ್ಲ.

ಅಪ್ರಾಪ್ತೆಯ ಕಿಡ್ನಾಪ್ ಪ್ರಕರಣ.!

ಅಪ್ರಾಪ್ತೆಯು ಖಾಸಗಿ ಶಾಲೆಯಲ್ಲಿ 10ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಳು. 2021ರ ಡಿಸಂಬರ್ ತಿಂಗಳಲ್ಲಿ ಪರೀಕ್ಷೆಯು ನಡೆಯುವ ಸಮಯದಲ್ಲಿ ಶಾಲೆಗೆ ಹೋಗಿದ್ದ ಮಗಳು ಪರೀಕ್ಷೆ ಮುಗಿದರು ಮನೆಗೆ ಬಂದಿರಲಿಲ್ಲ. ಆ ಬಳಿ ಮನೆಗೆ ಬಂದ ವೇಳೆಯಲ್ಲಿ ವಿಚಾರಿಸಿದಾಗ ಪ್ರಶ್ನೆಪತ್ರಿಕೆ ತರಲು ಸೈಬರ್‍‌ಗೆ ಹೋಗಿದ್ದೆ ತಡವಾಯಿತು ಎಂದಿದ್ದಳು. ಡಿಸಂಬರ್ 27ರ ಸಂಜೆ ಅಪ್ರಾಪ್ತೆ ತಾತನ ಮನೆಗೆ ನಿತ್ಯ ಓದಲು ಹೋಗುವಂತೆ ಹೋಗಿದ್ದಾಳೆ. ಆದರೆ ತಾತನ ಮನೆಗೆ ಹೋಗದೇ ಆಕೆ ಎಲ್ಲಿಯೋ ಹೋಗಿದ್ದಾಳೆ. ಈ ಬಗ್ಗೆ ಅಕ್ಕ ಪಕ್ಕ ಮತ್ತು ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದರು ಅಪ್ರಾಪ್ತೆ ಪತ್ತೆಯಾಗಿರುವುದಿಲ್ಲ. ಲಿಂಗಾರಾಜು ಅಲಿಯಾಸ್ ವಿರಾಟ್ ಎಂಬಾತ ಕರೆದುಕೊಂಡು ಹೋಗಿರಬಹುದು ಕಿಡ್ನಾಪ್ ಮಾಡಿದ್ದಾನೆ ಎಂದು ಶಿವಮೊಗ್ಗ ಪೊಲೀಸ್ ಠಾಣೆಗೆ ಅಪ್ರಾಪ್ತೆಯ ತಂದೆ ದೂರನ್ನು ನೀಡಿರುತ್ತಾರೆ.

ಹುಡುಗಿ ಹೆಸರಿನಲ್ಲಿ ಚಾಟಿಂಗ್.! ಹಣಕಾಸಿನ ಸಮಸ್ಯೆಯಾಗಿಲ್ಲ.? ಹೈಕೋರ್ಟ್ ತಾಕೀತು.?

ಲಿಂಗರಾಜು ಮತ್ತು ಅಪ್ರಾಪ್ತೆ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಚಾರ ತಂದೆಗೆ ತಿಳಿದು ಅಪ್ರಾಪ್ತೆಗೆ ಬುದ್ದಿ ಹೇಳಿದ್ದರು. ಆ ನಂತರ ಲಿಂಗರಾಜು ಹುಡುಗಿಯೊಬ್ಬಳ ಹೆಸರಿನಲ್ಲಿ ಚಾಟಿಂಗ್ ಮುಂದುವೆರಿಸಿದ್ದನು. ಈಕೆಯು ಬೇರೊಂದು ಹುಡುಗಿಯ ಹೆಸರಿನಲ್ಲಿ ಟೆಲಿಗ್ರಾಂನಲ್ಲಿ ಚಾಟಿಂಗ್ ನಡೆಸಿದ್ದರು. ಇದರಿಂದಾಗಿ ಯಾವುದೋ ಗೆಳತಿ ಎಂದು ಪೋಷಕರು ಸುಮ್ಮನಾಗಿದ್ದರು. ಅಸಲಿಗೆ ಪ್ರೇಮಿಗಳು ಪರಾರಿಯಾದ ಬಳಿಕವೇ ಚಾಟಿಂಗ್ ರಹಸ್ಯ ಬಯಲಾಗಿದೆ. ಜಯನಗರ ಮಹಳಾ ಪೊಲೀಸರು ಕಳೆದ ಎಂಟು ತಿಂಗಳಿಂದ ಸತತವಾಗಿ ಹುಡುಕಾಟವನ್ನು ನಡೆಸುತ್ತಿದ್ದರು ಆರೋಪಿ ಮತ್ತು ಅಪ್ರಾಪ್ತೆ ಪತ್ತೆಯಾಗಿಲ್ಲ. ಆರೋಪಿ ಮನೆಯನ್ನು ಬಿಟ್ಟು ತೆರಳುವ ವೇಳೆ 6 ಲಕ್ಷ ನಗದನ್ನು ತೆಗೆದುಕೊಂಡು ಹೋಗಿರುವ ಕಾರಣ ಹಣಕಾಸಿನ ಸಮಸ್ಯೆಯಾಗಿಲ್ಲ. ಆರೋಪಿ ಮತ್ತು ಅಪ್ರಾಪ್ತೆ ಮೊಬೈಲ್ ಬಳಕೆಯನ್ನು ಮಾಡದಿರುವುದು ಪೊಲೀಸರು ಆರೋಪಿಯನ್ನು ಹಿಡಿಯಲು ಕಷ್ಟವಾಗುತ್ತಿದೆ. ಇನ್ನು ನಗದು ಹಣ ಇರುವ ಕಾರಣ ಎಟಿಎಂ ಅನ್ನು ಲಿಂಗರಾಜು ಅಲಿಯಾಸ್ ವಿರಾಟ್ ಬಳಸಿಲ್ಲ.

ಇನ್ನೂ ಅಪ್ರಾಪ್ತೆಯನ್ನು ಹುಡುಕಿಕೊಡುವಂತೆ ಅಪ್ರಾಪ್ತೆಯ ಪೋಷಕರು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅನ್ನು ಹಾಕಿಕೊಂಡಿದ್ದಾರೆ. ನ್ಯಾಯಲಯವು ಪೊಲೀಸರಿಗೆ ಅಪ್ರಾಪ್ತೆಯನ್ನು ಹುಡುಕುವಂತೆ ತಾಕೀತು ಮಾಡಿದೆ. ಆದರೆ ಅಪ್ರಾಪ್ತೆ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವೂ ಪೊಲೀಸರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಇದರಿಂದಾಗಿ ಪೊಲೀಸರು ಶತಾಯಗತಾಯ ಅಪ್ರಾಪ್ತೆ ಮತ್ತು ಆರೋಪಿ ಲಿಂಗರಾಜುವಿನ ಪತ್ತೆಗೆ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.

ಹುಡುಗಿಗೆ 18 ವರುಷ ತುಂಬಿದ ಮೇಲೂ ಸಿಕ್ಕರೂ ಸಮಸ್ಯೆ.!

ಲಿಂಗರಾಜು ಅಲಿಯಾಸ್ ವಿರಾಟ್ ಅಪ್ರಾಪ್ತೆಯನ್ನು ಪ್ರೀತಿಸಿ ಕರೆದುಕೊಂಡು ಹೋದ ಮೇಲೆ ಮೂರಕ್ಕೂ ಹೆಚ್ಚು ಸಲ ತಾಯಿ ಮತ್ತು ಅಣ್ಣನಿಗೆ ಕರೆಯನ್ನು ಮಾಡಿದ್ದಾನೆ. ಈ ಮಾಹಿತಿಯನ್ನು ಶಿವಮೊಗ್ಗ ಪೊಲೀಸರಿಗೆ ತಿಳಿಸಿರಲಿಲ್ಲ. ಇದಕ್ಕಾಗಿ ಶಿವಮೊಗ್ಗ ಪೊಲೀಸರು ತಾಯಿ ಮತ್ತು ಅಣ್ಣನ ಮೇಲೂ ಪೋಕ್ಸೋ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿತ್ತು. ಇವರಿಬ್ಬರೂ ಒಂದೂವರೆ ತಿಂಗಳ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ಲಿಂಗರಾಜುವನ್ನು ಪ್ರೀತಿಯಿಂದ ದೂರ ಮಾಡುವ ಸಲುವಾಗಿ ಪೋಷಕರು ರಿಹ್ಯಾಬಿಲೇಷನ್ ಸೆಂಟರ್‍‌ಗೆ ದಾಖಲು ಮಾಡಿದ್ದರು. ಈ ವೇಳೆ ಕೌನ್ಸಿಲಿಂಗ್ ಮಾಡಿದ್ದ ವೈದ್ಯರ ಬಳಿ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದೇನೆ. ಆಕೆಯನ್ನು ಕರೆದುಕೊಂಡು ಹೋಗುತ್ತೇನೆ. ಆಕೆಗೆ 18 ವರುಷ ತುಂಬುವ ತನಕ ವಾಪಸ್ ಬರುವುದಿಲ್ಲ ಎಂದಿದ್ದನಂತೆ. “ಈತ ಹೇಳಿದಂತೆ ಅಪ್ರಾಪ್ತೆ 18 ವರುಷ ತುಂಬುವವರೆಗೂ ಸಿಗದೇ ಆ ನಂತರ ಪೊಲೀಸರಿಗೆ ಸಿಕ್ಕಿದರೂ ಈ ಕೇಸ್‌ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅಸಲಿಗೆ ಪೋಕ್ಸೋ ಮತ್ತು ಕಿಡ್ನಾಪ್ ಕೇಸ್‌ನಲ್ಲಿ ಲಿಂಗರಾಜು ಬಂಧನವಾಗುವುದು ಖಚಿತ ಎಂದು ತಿಳಿದು ಬಂದಿದೆ.

ಆರೋಪಿಯ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ ಬಹುಮಾನ ಗೆಲ್ಲಿ

ಲಿಂಗರಾಜ್ ಕೆಲವರ ಬಳಿಯಲ್ಲಿ ತಾನೂ ಅಪ್ರಾಪ್ತೆಯನ್ನು ಗರಾಜ್ ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎ‍ಣ್ಣೆಗೆಂಪು ಮೈಬಣ್ಣ, ಕಪ್ಪಕಣ್ಣು ಚಿಗುರುಗಡ್ಡ, ಚಿಗುರು ಮೀಸೆಯಿದ್ದು ಕನ್ನಡ ಮತ್ತು ತೆಲಗು ಮಾತನಾಡುತ್ತಾನೆ ಎಂದು ಪೊಲೀಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ದೂರು ದಾಖಲಾಗಿರುವುದರಿಂದ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು ಆರೋಪಿ ಮತ್ತು ಅಪ್ರಾಪ್ತೆ ಮಾಹಿತಿ ತಿಳಿದು ಬಂದರೆ. ಪೊಲೀಸ್ ನಿರೀಕ್ಷಕರು ಮಹಿಳಾ ಪೊಲೀಸ್ ಠಾಣೆ ಶಿವಮೊಗ್ಗ ಫೋನ್ ನಂ 9480803349 ಮತ್ತು 9449584739 ಹಾಗೂ ಪೊಲೀಸ್ ನಿಯಂತ್ರಣ ಕೊಠಡಿ ಫೋನ್ ನಂ 9480803300 ಗೆ ತಿಳಿಸಲು ಕೋರಿದ್ದಾರೆ.

- Advertisement -

Related news

error: Content is protected !!