Friday, August 19, 2022
spot_imgspot_img
spot_imgspot_img

ಆರ್‌ಎಸ್‌ಎಸ್‌ ಪ್ರಮುಖನಿಗೆ ಚೂರಿ ಇರಿತ; ಮದ್ಯದ ಅಮಲಿನಲ್ಲಿ ಕೃತ್ಯವೆಸಗಿದ ಅನ್ಯಕೋಮಿನ ಯುವಕರು

- Advertisement -G L Acharya G L Acharya
- Advertisement -

ಕ್ಷುಲ್ಲಕ ಕಾರಣಕ್ಕೆ ಆರ್​ಎಸ್​ಎಸ್​ ಪ್ರಮುಖನಿಗೆ ಅನ್ಯಕೋಮಿನ ಇಬ್ಬರು ಚಾಕುವಿಂದ ಇರಿದ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯಲ್ಲಿ ವೆಂಕಟೇಶ್ವರ ದೇಗುಲ ಬಳಿ ಘಟನೆ ನಡೆದಿದೆ. ರವಿ ಎಂಬವರು ಚಾಕು ಇರಿತಕ್ಕೊಳಗಾದ ವ್ಯಕ್ತಿ. ಮದ್ಯದ ಅಮಲಿನಲ್ಲಿ ಅನ್ಯ ಕೋಮಿನ ಯುವಕರಿಬ್ಬರು ಚಾಕುವಿನಿಂದ ಇರಿದಿದ್ದಾರೆ. ಒಬ್ಬ ಆರೋಪಿ ಸೈಯದ್ ವಸೀಂನನ್ನು ಸೆರೆ ಹಿಡಿಯಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಶನಿವಾರ ಮಧ್ಯಾಹ್ನ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ‌ ನಡೆಯುತಿತ್ತು. ಆ ವೇಳೆ ಗಲಾಟೆ ಬಿಡಿಸಲು ಹೋದಾಗ ಅನ್ಯಕೋಮಿನ ಇಬ್ಬರು ರವಿಗೆ ಚಾಕುವಿನಿಂದ ಇರಿದಿದ್ದಾರೆ. ರವಿ ಮುಖಕ್ಕೆ ಚಾಕು ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರೂ ಆರೋಪಿಗಳು ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗ ಗಲಾಟೆ ಮಾಡುತ್ತಿದ್ದರು. ಈ ವೇಳೆ ಗಲಾಟೆಯನ್ನು ಬಿಡಿಸಿ ಅಂಗಡಿಗೆ ವಾಪಸ್ಸಾಗುವಾಗ ರವಿ ಮೇಲೆ ಚಾಕು ಇರಿಯಲಾಗಿದೆ. ಆರೋಪಿಗಳ ಪೈಕಿ ಓರ್ವ ಆಟೋ ಚಾಲಕನಾಗಿದ್ದು, ಮತ್ತೋರ್ವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಾಲೂರು ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ.

ಸುದ್ದಿ ತಿಳಿದು ಸ್ಥಳದಲ್ಲಿ ಜಮಾಯಿಸಿದ ಅರ್‌ಎಸ್‌ಎಸ್ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

- Advertisement -

Related news

error: Content is protected !!