- Advertisement -
- Advertisement -


ಬೆಂಗಳೂರು: ಕರೆಂಟ್ ಇಂಡಕ್ಷನ್ ಸ್ಟೌವ್ನಲ್ಲಿ ಅಡುಗೆ ಮಾಡುವಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಮಹಿಳೆಗೆ ಗಂಭೀರ ಗಾಯಗೊಂಡಿದ್ದಾರೆ. ಮನೆಯಲ್ಲಿದ್ದ ದಿನ ಬಳಕೆ ವಸ್ತು ಸೇರಿದಂತೆ ಇತರ ಸಾಮಗ್ರಿ ಬೆಂಕಿಗೆ ಆಹುತಿಯಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಇಂತಹ ಘಟನೆ ಚಿಕ್ಕಬಾಣಾವರದ ಗಣಪತಿ ನಗರದಲ್ಲಿ ಸಂಭವಿಸಿದೆ. ಇಂಡಕ್ಷನ್ ಸ್ಟೌವ್ನಲ್ಲಿ ಅಡುಗೆ ಮಾಡುತ್ತಿದ್ದ 40 ವರ್ಷದ ಮಹಿಳೆ ಶೋಭಾಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -








