Thursday, December 1, 2022
spot_imgspot_img
spot_imgspot_img

ಇಂದು ಸಂಜೆ 6 ಗಂಟೆಗೆ ವಿವಾನ್ ಪ್ರೊಡಕ್ಷನ್ ಅರ್ಪಿಸುವ ‘ಐಸಬಾಸ್’ ಆಲ್ಬಂ ಸಾಂಗ್ ಬಿಡುಗಡೆ

- Advertisement -G L Acharya G L Acharya
- Advertisement -

ವಿವಾನ್ ಪ್ರೊಡಕ್ಷನ್ ಅರ್ಪಿಸುವ ವಿದ್ಯಾ ವೇಣುಗೋಪಾಲ ಆಚಾರ್ಯ ನಿರ್ಮಾಣದ ಚೇತನ್ ಕೆ ವಿಟ್ಲ ಇವರ ಸಾಹಿತ್ಯ, ರಾಗ ಸಂಯೋಜನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ “ಐಸಬಾಸ್” ಆಲ್ಬಂ ಸಾಂಗ್ ಇಂದು ಸಂಜೆ ೬ ಗಂಟೆಗೆ V4 Vaishu Creations youtube ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಅಶ್ವಿನ್ ಬಾಬಣ್ಣ ಇವರ ಸಂಗೀತದಲ್ಲಿ, ಭವಾನಿ ಶಂಕರ್ ಇವರ ಸಿರಿ ಕಂಠದಲ್ಲಿ ಮೂಡಿಬಂದಿರುವ ಈ ಹಾಡಿಗೆ ಅಚಲ್ ವಿಟ್ಲ ಇವರ ಸಹ ನಿರ್ದೆಶನವಿದೆ. ಬಾತು ಕುಲಾಲ್ ಇವರ ಛಾಯಗ್ರಹಣ ಹಾಗೂ ಸಂಕಲನವಿದೆ.

ಇದರ ಶೀರ್ಷಿಕೆಯನ್ನು ಖ್ಯಾತ ರಂಗಭೂಮಿ ನಿರ್ದೇಶಕ ಜೀವನ್ ರಾಮ್ ಬಿಡುಗಡೆ ಮಾಡಿದ್ದು, ಪೋಸ್ಟರನ್ನ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಾಲ್ ಸರ್ ಇವರು ಬಿಡುಗಡೆ ಮಾಡಿದರು ಹಾಗೂ ಆಲ್ಬಂ ಹಾಡನ್ನು ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಇವರು ಬಿಡುಗಡೆಗೊಳಿಸಿ ಹೊಸ ಪ್ರತಿಭೆಗಳಿಗೆ ಶುಭಹಾರೈಸಿದ್ದಾರೆ.ಈಗಾಗಲೇ ಆಲ್ಬಂ ಸಾಂಗ್‌ನ ಪೋಸ್ಟರ್ ರಿಲೀಸ್ ಆಗಿದ್ದು ಎಲ್ಲರ ಕೂತುಹಲ ಹೆಚ್ಚಿಸಿದೆ.

https://youtu.be/P1pq7OImttQ

MGK ಶಿಲ್ಪಾ ಕಲಾ ತಂಡದ ಹೊಸ ಪ್ರಯತ್ನವಾಗಿದ್ದು ಈ ಆಲ್ಬಂ ಹಾಡಿನಲ್ಲಿ ಈ ತಂಡ ಕಲಾ ಚತುರತೆಯನ್ನು ಕಾಣಬಹುದಾಗಿದೆ. ವಿಭಿನ್ನವಾಗಿ ಮೂಡಿ ಬಂದಿರುವ ಈ ಹಾಡು ಜನರನ್ನು ಸೆಳೆಯುತ್ತದೆ ಎಂದರೆ ತಪ್ಪಾಗಲಾರದು.

astr
- Advertisement -

Related news

error: Content is protected !!