Thursday, December 1, 2022
spot_imgspot_img
spot_imgspot_img

ಇಡ್ಕಿದು ಗ್ರಾಮ ಪಂಚಾಯತ್ – ಉಚಿತ ಆರೋಗ್ಯ ಭಾರತ್ ಹೆಲ್ತ್ ಕಾರ್ಡ್ ಅಭಿಯಾನ

- Advertisement -G L Acharya G L Acharya
- Advertisement -

ಇಡ್ಕಿದು: ಇಡ್ಕಿದು ಗ್ರಾಮ ಪಂಚಾಯತ್ ಮತ್ತು ಚತುರ್ವಿ ಗ್ರಾಮ ಒನ್ ಸೇವಾ ಕೇಂದ್ರ ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ಭಾರತ ಹೆಲ್ತ್ ಕಾರ್ಡ್ ನೋಂದಣಿ ಅಭಿಯಾನವು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಸುಧೀರ್‌ಕುಮಾರ್ ಶೆಟ್ಟಿ ಇವರು ದೀಪ ಪ್ರಜ್ವಲಿಸುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಸದರಿ ಯೋಜನೆಯಲ್ಲಿ ಇಡ್ಕಿದು ಮತ್ತು ಕುಳ ಗ್ರಾಮಗಳಿಂದ ಸುಮಾರು 239 ಫಲಾನುಭವಿಗಳ ನೋಂದಣಿ ಕಾರ್ಯವನ್ನು ಯಶಶ್ವಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂ.ಉಪಾಧ್ಯಕ್ಷರಾದ ಯಶೋಧ, ಪಂ.ಅ.ಅಧಿಕಾರಿ ಗೋಕುಲ್‌ದಾಸ್ ಭಕ್ತ, ಪಂ.ಸದಸ್ಯರಾದ ಚಿದಾನಂದ.ಪಿ, ಪುರುಷೋತ್ತಮ, ಶೋಭಾ, ಭಾಗೀರಥಿ, ಜಯಂತಿ, ತಿಲಕ್‌ರಾಜ್ ಶೆಟ್ಟಿ, ಸಿದ್ದಿಕ್‌ಆಲಿ, ಪಂ. ಸಿಬ್ಬ0ದಿ ಪೂರ್ಣಿಮಾ, ಭವ್ಯ, ಸಾವಿತ್ರಿ, ಗ್ರಾಮ ಸೇವಾ ಕೇಂದ್ರದ ಸಿಬ್ಬಂದಿಗಳಾದ ಕೃತಿ, ಕುಸುಮಾ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಚತುರ್ವಿ ಗ್ರಾಮ ಒನ್ ಸೇವಾ ಕೇಂದ್ರದ ಮಾಲಕರಾದ ಉದಯಕುಲಾಲ್ ಪುಂಡಿಕಾಯಿ ಇವರು ಸಹಕಾರ ನೀಡಿದರು.

astr
- Advertisement -

Related news

error: Content is protected !!