Friday, October 11, 2024
spot_imgspot_img
spot_imgspot_img

ಯುಪಿಎಸ್ ಸಿ ಫಲಿತಾಂಶ ಪ್ರಕಟ: ಪ್ರದೀಪ್ ಸಿಂಗ್ ಪ್ರಥಮ ರ‍್ಯಾಂಕ್

- Advertisement -
- Advertisement -

ನವದೆಹಲಿ: 2019ರ ಯುಪಿಎಸ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಪ್ರದೀಪ್ ಸಿಂಗ್ ಎಂಬುವವರು ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಜತೀಶ್ ಕಿಶೋರ್ ದ್ವಿತೀಯ ಸ್ಥಾನ ಹಾಗೂ ಪ್ರತಿಭಾ ವರ್ಮಾ ತೃತೀಯ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಒಟ್ಟು 829 ಮಂದಿ ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಅಂತಿಮ ಫಲಿತಾಂಶ ಯುಪಿಎಸ್ ಸಿಯ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದೆ.

http//www.upsc.gov.in. ನಲ್ಲಿ ಫಲಿತಾಂಶ ನೋಡಬಹುದಾಗಿದೆ.

ಬೆಂಗಳೂರಿನ ಕೀರ್ತನಾಗೆ 167ನೇ ರ‍್ಯಾಂಕ್:

ನಗರದ ನಾಗರಬಾವಿಯ ನಿವಾಸಿ ಕೀರ್ತನಾ ಎಂಬುವವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 167 ಸ್ಥಾನ ನಡೆದು, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಕೀರ್ತನಾ ಅವರು ರಾಜ್ ಕುಮಾರ್ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

- Advertisement -

Related news

error: Content is protected !!