Tuesday, July 23, 2024
spot_imgspot_img
spot_imgspot_img

ಉಡುಪಿ: ಬಸ್ಸು ಡಿಕ್ಕಿಯಾಗಿ ಪಾದಚಾರಿ ದುರ್ಮರಣ

- Advertisement -G L Acharya panikkar
- Advertisement -

ಉಡುಪಿ: ಬಸ್ಸು ಡಿಕ್ಕಿ ಹೊಡೆದ ವೇಗಕ್ಕೆ ಪಾದಚಾರಿ ದುರಂತ ಸಾವನ್ನಪ್ಪಿದ ಘಟನೆ ನಡೆದಿದೆ. ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಯೊಬ್ಬರಿಗೆ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯ ದೇಹ ಛಿದ್ರಛಿದ್ರವಾಗಿದೆ. ಪಾದಚಾರಿ ಶೇಖರ್ ಸಾವನ್ನಪ್ಪಿದ ದುರ್ದೈವಿ.

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕುಂದಾಪುರದಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ ವೇಗವಾಗಿ ಬಂದು ಢಿಕ್ಕಿ ಹೊಡೆಯಿತು. ಪಾದಚಾರಿ ಶೇಖರ್ ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಢಿಕ್ಕಿಯ ಬಳಿಕ ದೇಹದ ಮೇಲೆ ಬಸ್ಸಿನ ಚಕ್ರಗಳು ಸಾಗಿಹೋದುದರಿಂದ ದೇಹದ ಭಾಗಗಳು ಹೆದ್ದಾರಿಯಲ್ಲಿ ಛಿದ್ರವಾಗಿ ಬಿದ್ದಿದ್ದವು. ಈ ಜಾಗದಲ್ಲಿ ಸಮರ್ಪಕ ದಾರಿದೀಪವಿಲ್ಲದ ಹಿನ್ನಲೆಯಲ್ಲಿ ಅಪಘಾತ ನಡೆದಿದೆ ಎಂದು ಹೇಳಲಾಗಿದ್ದು, ಅಪಘಾತದ ಬಳಿಕ ದಾರಿದೀಪದ ದುರವಸ್ಥೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!