Friday, August 19, 2022
spot_imgspot_img
spot_imgspot_img

ಉಡುಪಿ ಮೂಲದ ಸಿನಿ ಸದಾನಂದ ಶೆಟ್ಟಿಗೆ ಮಿಸ್‌ ಇಂಡಿಯಾ ಕಿರೀಟ..! ವಿಶ್ವ ಸುಂದರಿಯಾಗ್ತಾರಾ ಈ ಚೆಲುವೆ..!?

- Advertisement -G L Acharya G L Acharya
- Advertisement -

ಉಡುಪಿ ಮೂಲದ ಸಿನಿ ಶೆಟ್ಟಿ 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಇನ್ನಂಜೆಯ ಮೂಲದ 21ರ ಹರೆಯದ ಸಿನಿ ಶೆಟ್ಟಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಭಾನುವಾರ ಜುಲೈ 04 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಫಿನಾಲೆಯಲ್ಲಿ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಿನಿ ಶೆಟ್ಟಿ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ಅವರು ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ಕೋರ್ಸ್ ವ್ಯಾಸಾಂಗ ಮಾಡುತಿದ್ದಾರೆ. 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ರಾಜಸ್ಥಾನದ ರೂಬಲ್ ಶೇಕಾವತ್ ಮತ್ತು ಉತ್ತರ ಪ್ರದೇಶದ ಶಿಂತಾನಾ ಚೌಹಾಣ್ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ವಿಶ್ವ ಸುಂದರಿಯಾಗ್ತಾರಾ ಕರಾವಳಿ ಮೂಲದ ಚೆಲುವೆ. ಉಡುಪಿ, ಮಂಗಳೂರು ಮೂಲದ ಚೆಲುವೆಯರೂ ಈ ಹಿಂದೆ ವಿಶ್ವವನ್ನೇ ಗಮನಸೆಳೆದಿದ್ದರು. 1994 ರ ವಿಶ್ವ ಸುಂದರಿಯಾಗಿ ಐಶ್ವರ್ಯಾ ರೈ ಹೊರಹೊಮ್ಮಿದ್ದರು.

ಆ ಬಳಿಕ ಕರಾವಳಿ ಮೂಲದ ಪ್ರತಿಭೆಗಳು ಇನ್ನಷ್ಟು ಸೌಂದರ್ಯ ಸ್ಪರ್ಧೆಯಲ್ಲಿ ತೊಡಗಿಸಿಕೊಂಡರು. ಮುಂದಿನ ವರ್ಷಗಳಲ್ಲಿ ಶ್ರೀನಿಧಿ ಶೆಟ್ಟಿ ಸುಪ್ರನ್ಯಾಶನಲ್ ಆಗಿ ಹೊರಹೊಮ್ಮಿ ಹೊಸ ಅಧ್ಯಾಯ ಬರೆದರು. ೧೯೯೪ರಲ್ಲಿ ಕರಾವಳಿ ಬೆಡಗಿ ಐಶ್ವರ್ಯಾ ಮಿಸ್‌ ವರ್ಲ್ಡ್‌ ಪಟ್ಟ ಗೆದ್ದಿದ್ದಾರೆ. ಈ ಬಾರಿಯೂ ಕರಾವಳಿ ಮೂಲದ ಸುಂದರಿ ವಿಶ್ವಸುಂದರಿಯಾಗಲಿ..!

- Advertisement -

Related news

error: Content is protected !!