ಉಳ್ಳಾಲ; ಪಜೀರು ಅರ್ಕಾನ ಬದ್ರಿಯಾ ಜುಮಾ ಮಸೀದಿಗೆ ನುಗ್ಗಿದ ಕಳ್ಳರು ಪಿಕ್ಕಾಸು ಬಳಸಿ ಕಾಣಿಕೆ ಡಬ್ಬಿಗಳನ್ನು ಹೊಡೆದು ನಗದು ದೋಚಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮಸೀದಿಗೆ ಸೇರಿದ ಒಟ್ಟು ಆರು ಕಾಣಿಕೆ ಡಬ್ಬಿಗಳನ್ನು ಮಸೀದಿಯ ಪಕ್ಕದ ಕೋಣೆಯೊಂದರಲ್ಲಿದ್ದ ಪಿಕ್ಕಾಸುನ್ನು ಬಳಸಿ ಒಡೆದು ಹಣ ಕಳ್ಳತನ ಮಾಡಲಾಗಿದೆ.ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಓರ್ವ ವ್ಯಕ್ಯಿ ಕೃತ್ಯ ಮಾಡುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಸೀದಿಯನ್ನು ದೋಚುವ ಮುನ್ನ ಅಥವಾ ನಂತರ ಶಾಲೆಯೊಳಗಡೆ ಪಾರ್ಟಿ ಮಾಡಿರುವ ಸೊತ್ತುಗಳು ಪತ್ತೆಯಾಗಿವೆ. ಮುಖಕವಚ,ಟಿಕ್ಕಾ ಮಾಡುವ ಯಂತ್ರ, ಉಪ್ಪು, ಖಾರದ ಹುಡಿ, ಗ್ಯಾಸ್ ಲೈಟರ್ ಶಾಲೆಯ ಬಳಿ ಕಂಡು ಬಂದಿದೆ.
ಸಿಸಿಟಿವಿಯಲ್ಲಿ ಹೊರಗಿನ ಕಾಣಿಕೆ ಡಬ್ಬಿಯನ್ನು ಮುರಿದ ಕಳ್ಳ ಬಳಿಕ ಮಸೀದಿಯ ಬಾಗಿಲಿನ ಚಿಲಕ ಒಡೆದು ಒಳಗೆ ನುಗ್ಗಿ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ಕಳ್ಳತನ ಮಾಡಿದ್ದಾನೆ. ಸ್ಥಳಕ್ಕೆ ಶಾಸಕ ಯು.ಟಿ ಖಾದರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.