

ಎಟಿಎಂ ಉಪಯೋಗಿಸಲು ಬರದೆ ಇರುವವರು ಅಪರಿಚಿತರ ಕೈಗೆ ಕಾರ್ಡ್ ಕೊಟ್ಟರೆ ಆಗುವ ಮೋಸಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಕೊಳ್ಳೇಗಾಲ ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಕಳೆದ ಎರಡು ಮೂರು ದಿನಗಳ ಹಿಂದೆ ಜಾಗೇರಿ ಗ್ರಾಮದ ಶೇಶುರಾಜ್ ಹೋಗಿದ್ದರು. ಇವರಿಗೆ ಎಟಿಎಂ ನಿಂದ ಹಣ ಡ್ರಾ ಮಾಡಲು ತಿಳಿದಿರಲಿಲ್ಲ. ಹೀಗಾಗಿ ಅಲ್ಲೇ ಇದ್ದ ಅಪರಿಚಿತನ ಕೈಗೆ ಕಾರ್ಡ್ ಕೊಡ್ಡಿದ್ದಾರೆ. ಆತ ಇವರಿಗೆ ಬೇಕಾದ 500 ರೂ. ಡ್ರಾ ಮಾಡಿ ಎಟಿಎಂ ಸಹಿತ ಹಣ ಕೈಗೆ ಇಟ್ಟಿದ್ದಾನೆ..! ಆದ್ರೆ ಮುಂದೆ ಆದದ್ದು ಮಹಾ ಎಡವಟ್ಟು..!
ಮರುದಿನ ಶೇಶುರಾಜ್ ಅವರ ಫೋನಿಗೆ ನಿಮ್ಮ ಖಾತೆಯಿಂದ 19 ಸಾವಿರ ರೂ. ಡ್ರಾ ಆಗಿದೆ ಎಂಬ ಮೆಸೇಜ್ ಬಂದಿದೆ. ತನ್ನ ಬಳಿಯೇ ಎಟಿಎಂ ಕಾರ್ಡ್ ಇದ್ದರೂ ಹೇಗೆ ಹಣ ಡ್ರಾ ಆಗಿದೆ ಎಂದು ಶೇಶುರಾಜ್ಗೆ ಆಶ್ಚರ್ಯವಾಗಿದೆ. ಇದರಿಂದ ಗೊಂದಲಕ್ಕೀಡಾದ ಶೇಶುರಾಜ್ ಎಟಿಎಂ ಕಾರ್ಡ್ ತೆಗೆದು ನೋಡಿದಾಗ ಅದು ಬೇರೆ ಕಾರ್ಡ್ ತನ್ನದಲ್ಲ ಎಂದು ಗೊತ್ತಾಗಿದೆ.
ತಾನು ಮೋಸ ಹೋದದ್ದು ಅರಿವಾಗಿ ಮಾ.24ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ ಹಣ ವಾಪಸ್ ಮಾಡಿ ಎಂದು ಮನವಿ ಮಾಡಿದ್ದಾನೆ.

