Saturday, May 15, 2021
spot_imgspot_img
spot_imgspot_img

ಐಪಿಎಲ್ 2021:​​ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ 2ನೇ ಗೆಲುವು ಸಾಧಿಸಿದ ಆರ್​​ಸಿಬಿ!

- Advertisement -
- Advertisement -

ಚೆನ್ನೈ: ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 6 ರನ್ ಗಳ ರೋಚಕ ಗೆಲುವು ಪಡೆದುಕೊಂಡಿದ್ದು, ಆ ಮೂಲಕ ಟೂರ್ನಿಯಲ್ಲಿ 2ನೇ ಗೆಲುವು ಪಡೆದುಕೊಂಡಿದೆ.

150 ರನ್​ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್​​ಗಳಷ್ಟೇ ಗಳಿಸಿತು. ಆರ್​​ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಶಹಬಾಜ್ ಅಹ್ಮದ್ ಒಂದೇ ಓವರಿನಲ್ಲಿ ಹೈದರಾಬಾದ್ ತಂಡದ ಪ್ರಮುಖ ಮೂವರು ಆಟಗಾರರ ವಿಕೆಟ್​ ಪಡೆದು ಪಂದ್ಯಕ್ಕೆ ಟ್ವಿಸ್ಟ್​ ಕೊಟ್ಟರು.

150 ರನ್​ಗಳ ಟಾರ್ಗೆಟ್​ ಪಡೆದ ಹೈದರಾಬಾದ್ ತಂಡಕ್ಕೆ ಮೊದಲ ಶಾಕ್ ಕೊಟ್ಟ ಸಿರಾಜ್​ ಆರಂಭಿಕ ಸಹಾರನ್ನು ಕೇವಲ 1 ರನ್​​ಗೆ ಪೆವಿಲಿಯನ್​ಗೆ ಅಟ್ಟಿದ್ದರು. ಆದರೆ ಆರಂಭಿಕ ಆಘಾತ ಎದುರಿಸಿದ ತಂಡಕ್ಕೆ ನಾಯಕ ವಾರ್ನರ್​, ಮನೀಶ್​ ಪಾಂಡೆ ಜೋಡಿ ಚೇತರಿಕೆ ನೀಡಿದರು. ಈ ಜೋಡಿ 2ನೇ ವಿಕೆಟ್​ಗೆ 69 ಎಸೆತಗಳಲ್ಲಿ 83 ರನ್​ ಗಳಿಸಿತ್ತು. ಉತ್ತಮ ಬ್ಯಾಟಿಂಗ್​​ನೊಂದಿಗೆ ಮುನ್ನುಗುತ್ತಿದ್ದ ತಂಡಕ್ಕೆ ಶಹಬಾಜ್ ಅಹ್ಮದ್ ಶಾಕ್ ನೀಡಿದರು.

ಒಂದೇ ಓವರಿನಲ್ಲಿ ಮೂರು ವಿಕೆಟ್ ಪಡೆದ ಶಹಬಾಜ್ ಅಹ್ಮದ್ ಪಂದ್ಯವನ್ನು ಆರ್​ಸಿಬಿ ಕಡೆ ಟರ್ನ್​ ಮಾಡಲು ಯಶಸ್ವಿಯಾದರು. ಅಂತಿಮ ಹಂತದಲ್ಲಿ ರಶೀದ್​ ತಂಡಕ್ಕೆ ಗೆಲುವು ತಂದು ಕೊಡಲು ಯತ್ನಸಿದರೂ ಅಂತಿಮವಾಗಿ 17 ರನ್​ಗಳಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಇದರೊಂದಿಗೆ ಆರ್​ಸಿಬಿ ಗೆಲುವು ಖಚಿತವಾಗಿತ್ತು.

ಅಂತಿಮ 5 ಓವರ್​ಗಳಲ್ಲಿ ರನ್​ಗಳಿಸಲು ಸೆಣಸಾಡಿದ ಹೈದರಾಬಾದ್​ ಬ್ಯಾಟ್ಸ್​​ಮನ್​​ಗಳು 28 ರನ್​ಗಳಿಸಿ 7 ವಿಕೆಟ್​ ಕೈ ಚೆಲ್ಲಿದ್ದರು. ಆರ್​ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್​ ಮಾಡಿ ಮೂರು ವಿಕೆಟ್​ ಪಡೆದರೆ, ಸಿರಾಜ್ ಮತ್ತು ಹರ್ಷಲ್ ಪಟೇಲ್​ ತಲಾ 2 ವಿಕೆಟ್, ಜೆಮೀಸನ್ ಒಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಕಾರಣ ನೀಡಿದರು.

- Advertisement -
- Advertisement -

MOST POPULAR

HOT NEWS

Related news

error: Content is protected !!