Monday, August 10, 2026
spot_imgspot_img
spot_imgspot_img

ಐವರ ಗುಂಡಿಟ್ಟು ಕೊಂದ ಕೇಸ್: ಛೋಟಾ ರಾಜನ್​ಗೆ ಬಿಗ್ ರಿಲೀಫ್

- Advertisement -
- Advertisement -

1999ರ ಮುಂಬೈನ ಬಾಂದ್ರಾ ಬಳಿ ಗುಂಡಿನ ದಾಳಿ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಪಾತಕಿ ಛೋಟಾ ರಾಜನ್‌ ಹಾಗೂ ಇತರರ ವಿರುದ್ಧ ದಾಖಲಾಗಿರುವ ಎಂಸಿಒಸಿಎ ಪ್ರಕರಣದಲ್ಲಿ ಮುಂಬೈನ ವಿಶೇಷ ಕೋರ್ಟ್‌ ರಿಲೀಫ್​​​ ನೀಡಿದೆ.

vtv vitla
vtv vitla

ಮುಂಬೈನ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿ 1999ರ ಮಾರ್ಚ್‌ 1ರಂದು ಐವರು ವ್ಯಕ್ತಿಗಳು ಹಾಗೂ ಓರ್ವ ಯುವತಿ ಮೇಲೆ ಗುಂಡು ಹಾರಿಸಲಾಗಿತ್ತು. ಆರು ಮಂದಿಯ ಪೈಕಿ ಐವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಛೋಟಾ ರಾಜನ್ ಸೇರಿ ಇತರರನ್ನ ಆರೋಪಿಯನ್ನಾಗಿ ಮಾಡಲಾಗಿತ್ತು.

vtv vitla
vtv vitla

ತನ್ನ ಕಕ್ಷಿದಾರ ಛೋಟಾ ರಾಜನ್ ವಿರುದ್ಧ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ಹೀಗಿದ್ದೂ ಆತನ ವಿರುದ್ಧ ಆರೋಪಿಸಲಾಗಿತ್ತು ಎಂದು ವಕೀಲ ತುಷಾರ್ ಕೋರ್ಟ್​​ನಲ್ಲಿ ವಾದಿಸಿದ್ದರು. ಮಾತ್ರವಲ್ಲ ಈ ತನಿಖೆಯು ಅನುಮಾನಗಳಿಂದ ಕೂಡಿದೆ ಎಂದು ವಕೀಲರು ವಾದಿಸಿದ್ದರು.

- Advertisement -

Related news

error: Content is protected !!