- Advertisement -
- Advertisement -
ಕಡಬ: ಕಡಬ ಪೇಟೆಯ ಸಮೀಪ ಕಾರೊಂದು ವಿದ್ಯುತ್ ಕಂಬಕ್ಕೆ ಗುದ್ದಿದ್ದು ಚಾಲಕ ಅಪಾಯದಿಂದ ಪಾರಾದ ಘಟನೆ ರಾತ್ರಿ 9:30 ರ ಸುಮಾರಿಗೆ ನಡೆದಿದೆ.
ಕಡಬದ ಹಳೆಸ್ಟೇಷನ್ ಎಂಬಲ್ಲಿ ರಸ್ತೆ ಬದಿಯ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಕರೆಂಟು ಕಂಬ ಛಿದ್ರಗೊಂಡು ಮುರಿದು ಬಿದ್ದು ವಿದ್ಯುತ್ ತಂತಿಗಳು ಕಾರಿನ ಮೇಲೆ ಇರುವುದು ಅಪಘಾತದ ತೀವ್ರತೆಯನ್ನು ತೋರಿಸುವಂತಿದೆ.
ಕಾರು ಕಡಬದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕಾರು ಸುಬ್ರಹ್ಮಣ್ಯ ಮೂಲದ್ದು ಎಂಬ ಮಾಹಿತಿ ಸಿಕ್ಕಿದ್ದು ಪೂರ್ಣ ಮಾಹಿತಿ ಲಭ್ಯವಾಗಿಲ್ಲ.
ಕರೆಂಟು ಕಂಬ ಮುರಿದು ಬಿದ್ದ ಹಿನ್ನೆಲೆಯಲ್ಲಿ ಆ ಭಾಗಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

- Advertisement -