Friday, July 4, 2025
spot_imgspot_img
spot_imgspot_img

ಕರಾವಳಿ ಅಡಿಕೆ ಬೆಳೆಗಾರರಿಗೆ ಸಿಹಿಸುದ್ದಿ; ಗಣೇಶ ಚತುರ್ಥಿ ಬಳಿಕ ಇನ್ನೂ ಏರಲಿದೆ ಅಡಿಕೆ ಬೆಲೆ

- Advertisement -
- Advertisement -

ಮಂಗಳೂರು: ಲಾಕ್ ಡೌನ್ ಆದಾಗಿನಿಂದ ಅಡಿಕೆ ಬೆಲೆಯಲ್ಲಿ ತೀವ್ರ ಏರಿಕೆ ಕಂಡಿತ್ತು. ಇದು ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ತರಿಸಿತ್ತು. ಇದೀಗ ಅಡಿಕೆ ಬೆಲೆ ಮತ್ತಷ್ಟು ಏರಿಕೆಯತ್ತ ಸಾಗಿ ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡಲಿದೆ.

ಹೌದು, ಮುಂದಿನ ಗಣೇಶ ಚತುರ್ಥಿ ಕಳೆದ ಮೇಲೆ ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಚೇತರಿಕೆ ಕಂಡು ಉತ್ತಮ ಬೆಲೆಯಲ್ಲಿ ಖರೀದಿಸಲ್ಪಡುತ್ತಿದ್ದು, ಕೊರೋನಾ ಮಧ್ಯೆಯೂ ಅಡಿಕೆ ಬೆಳೆಗಾರರ ಕೈ ಹಿಡಿದಿತ್ತು.

ಈಗಿನ ಮಾರುಕಟ್ಟೆಯ ಬೆಲೆಯಂತೆ ಹೊಸ ಅಡಿಕೆ ಕೆಜಿಗೆ ರೂ.380 – 460, ಹಳೆ ಅಡಿಕೆ ಕೆಜಿಗೆ 385 – 510, ಡಬಲ್ ಚೋಲ್ ಕೆಜಿಗೆ 385 – 510 ಹಾಗೂ ಉಳಿದಂತೆ ಫಟೋರ ಕೆಜಿಗೆ 280 – 375, ಉಳ್ಳಿಗಡ್ಡೆ ಕೆಜಿಗೆ 150 – 285, ಕರಿಗೋಟು ಕೆಜಿಗೆ 150 – 285 ಬೆಲೆಯಲ್ಲಿ ಗುಣಮಟ್ಟ ನೋಡಿಕೊಂಡು ನಿಗದಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ಅಡಿಕೆ ಬೆಲೆ ಏರಿಕೆ ಹಿಂದೆಂದಿಗಿಂತಲೂ ಹೆಚ್ಚಾಗಲಿ ಎಂಬ ಆಶಯದಲ್ಲಿ ಅಡಿಕೆ ಬೆಳೆಗಾರರು ಇದ್ದಾರೆ.

- Advertisement -

Related news

error: Content is protected !!