Friday, March 5, 2021

ಕರ್ನಾಟಕ ರಾಜ್ಯಸಭೆ ಎಲೆಕ್ಷನ್- ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಘೋಷಣೆ

ಬೆಂಗಳೂರು: ಆರ್ ಎಸ್ ಎಸ್ ಮೂಲದ ಡಾ.ಕೆ ನಾರಾಯಣ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಮತ್ತೆ ಸಂದೇಶ ರವಾನಿಸಿದೆ.

ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭೆ ಸ್ಥಾನಕ್ಕೆ ಡಿ.1ರಂದು ಚುನಾವಣೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಘಟಕ ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ, ಪರಿಷತ್ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೆಸರನ್ನು ಶಿಫಾರಸು ಮಾಡಿತ್ತು.

ರಾಜ್ಯ ನಾಯಕರು ಸೂಚಿಸಿದ ಮೂರೂ ಹೆಸರನ್ನು ತಿರಸ್ಕರಿಸಿರುವ ಬಿಜೆಪಿ ಹೈಕಮಾಂಡ್ ಇದೀಗ ಡಾ. ಕೆ.ನಾರಾಯಣ ಎಂಬ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಯಿಂದ 50 ವರ್ಷಗಳಿಂದ ಆರ್ ಎಸ್ ಎಸ್ ನಲ್ಲಿ ಸಕ್ರೀಯ ಕಾರ್ಯಕರ್ತರಾಗಿ ದುಡಿಯುತ್ತಿದ್ದ ಡಾ.ನಾರಾಯಣ್ ಅವರಿಗೆ ಟಿಕೆಟ್ ನೀಡುವ ಮೂಲಕ ಎಲ್ಲ ಊಹೆಗಳಿಗೆ ತೆರೆ ಎಳೆಯಲಾಗಿದೆ.

- Advertisement -

MOST POPULAR

HOT NEWS

Related news

error: Content is protected !!