
ವಿಟ್ಲ ಸಮೀಪದ ಒಕ್ಕೆತ್ತೂರು ನಿವಾಸಿ ನಿವೃತ್ತ ಸೈನಿಕ ಲಾರೆನ್ಸ್ ಪಾಯಸ್-ಲೂಸಿ ಪಾಯಸ್ ದಂಪತಿಯ ಪುತ್ರಿ ಲಿಲ್ಲಿ ಪಾಯಸ್ ಆವರು ಈ ಹಿಂದೆ ಗೋಳ್ತಮಜಲು ಸರಕಾರಿ ಪ್ರೌಢಶಾಲೆಯಲ್ಲಿ12ವರ್ಷಗಳ ಕಾಲ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವರ್ಗಾಣೆಯಾಗಿ ಅತ್ತಾವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 13ವರ್ಷಗಳಿಂದ ದೈಹಿಕ ತರಬೇತಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಟ್ಲದ ಬಾಲಿಕಾ ಪ್ರೌಢಶಾಲೆ ಮತ್ತು ವಿಟ್ಲ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಈ ಹಿಂದೆ ದೈಹಿಕ ಶಿಕ್ಷಣದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದಿದ್ದ ಇವರು ಇದೀಗ ಪ್ರಥಮ ಬಾರಿಗೆ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಷಕ್ಷೆ ಪಟ್ಟ ಅಲಂಕರಿಸಿದ್ದಾರೆ.

ಅವರು ತಮ್ಮ ಸಾಮಾಜಿಕ ಕಾರ್ಯ ಮತ್ತು ವಿವಿಧ ಸಾಮಾಜಿಕ ಚಟುವಟಿಕೆಗಳಿಗಾಗಿ ಜನರನ್ನು ಸಂಘಟಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. 2018ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನೂ ಪಡೆದಿದ್ದರು.
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ದಕ್ಷಿಣ ಕನ್ನಡ ಘಟಕದ ಸಾಮಾನ್ಯ ಸಭೆಯು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಅಧ್ಯಕ್ಷ ಶಿವರಾಮ ಯೇನೆಕಲ್ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷ ಕೆ ಎಚ್ ನಾಯಕ್, ಕಾರ್ಯಾಧ್ಯಕ್ಷ ಮಾಮಚ್ಚನ್ ಎಂ, ಕಡಬ, ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಮಂಗಳೂರು, ಕೋಶಾಧಿಕಾರಿ ತ್ಯಾಗಮ ಹರೇಕಳ, ಹಿರಿಯ ಉಪಾಧ್ಯಕ್ಷ ಯೋಗೀಶ್ ಪಂಜ, ಉಪಾಧ್ಯಕ್ಷರಾದ ಮೋನಪ್ಪ ಪಟ್ಟೆ, ಜಗದೀಶ್ ರೈ ತುಂಬೆ, ಸುರೇಶ್ ಶೆಟ್ಟಿ ಮಂಗಳೂರು, ಕೆ ಟಿ ಲಕ್ಷ್ಮೀ ಕಡಬ, ಅಜಿತ್ ಇತರ ಪದಾಧಿಕಾರಿಗಳು. ಕುಮಾರ್ ಬೆಳ್ತಂಗಡಿ, ಜಂಟಿ ಕಾರ್ಯದರ್ಶಿಗಳಾದ ಗಣೇಶ್ ಕುಲಾಲ್, ಚಿನ್ನಪ್ಪ ಬಂಟ್ವಾಳ್, ಉದಯ ಮೂಡುಬಿದಿರೆ, ಸಂಘಟನಾ ಕಾರ್ಯದರ್ಶಿಗಳಾದ ವಿನೋದ್ ಕುಮಾರ್ ಸೂರಿಂಜೆ, ನವೀನ್ ಪುತ್ರನ್ ಮೂಡುಬಿದಿರೆ, ಶ್ರೀಲತಾ ಪುತ್ತೂರು, ಅಬ್ದುಲ್ ಸಮ್ಮದ್ ಕಡಬ, ಹರಿಪ್ರಸಾದ್ ಸುಳ್ಯ, ಕ್ರೀಡಾ ಕಾರ್ಯದರ್ಶಿಗಳಾದ ಗುಣಪಾಲ ಬೆಳ್ತಂಗಡಿ, ದಾಮೋದರ ಪುತ್ತೂರು, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಆಲಿಸ್ ಬಿ. ಪತ್ರಿಕಾ ಕಾರ್ಯದರ್ಶಿ ನಾಗೇಶ್ ಮೂಡುಬಿದಿರೆ, ಆಂತರಿಕ ಲೆಕ್ಕ ಪರಿಶೋಧಕಿ ಲ್ಯಾನ್ಸಿ ಸಿಕ್ವೇರಾ ಹಾಗೂ ಪ್ರತಿ ತಾಲೂಕಿನಿಂದ ಒಬ್ಬ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು.
