Sunday, March 3, 2024
spot_imgspot_img
spot_imgspot_img

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘದಿಂದ ಅನಿರ್ದಿಷ್ಟಾವಧಿ ಹೋರಾಟ; ಎನ್‌ಪಿಎಸ್‌ ನೌಕರರಿಂದ ಮತ ಬಹಿಷ್ಕಾರ

- Advertisement -G L Acharya panikkar
- Advertisement -
vtv vitla

ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರ ಸಂಘ ಬಂಟ್ವಾಳ ರೆವಿನ್ಯೂ ತಂಡದಿಂದ ಅಹೋ ರಾತ್ರಿ ಧರಣಿ ಆರಂಭಗೊಂಡಿದೆ.

2014ರಿಂದ ನೂತನ ಪಿಂಚಣಿ ಯೋಜನೆಯ ವಿರುದ್ಧ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಗಮನ ನೀಡಿಲ್ಲ. ಆದರಿಂದ ಸರ್ಕಾರ ಎನ್‌ಪಿಎಸ್‌ ರದ್ದುಪಡಿಸಿ ಪ್ರಕಟಿಸುವರೆಗೂ ಅಹೋರಾತ್ರಿ ಧರಣಿ ನಡೆಸಲಾಗುವುದೆಂದು ನೌಕರರು ಪಟ್ಟುಹಿಡಿದಿದ್ದಾರೆ.

NPS ರದ್ದು ಮಾಡುವ ಪ್ರಸ್ತಾವನೆ ಇಲ್ಲದ ಯಾವುದೇ ಪಕ್ಷಕ್ಕೆ, ನನ್ನ ಮತ್ತು ನನ್ನ ಕುಟುಂಬದ ಅಮೂಲ್ಯವಾದ ಮತಗಳನ್ನು ಹಾಕುವ ಪ್ರಸ್ತಾವನೆ ನಮ್ಮ ಮುಂದೆ ಇರುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಯಾವುದೇ ಯೋಚನೆಗಳು ನಮ್ಮ ಮುಂದೆ ಇಲ್ಲ ಎನ್ನುತ್ತಾ ಚುನಾವಣೆ ಬಹಿಷ್ಕಾರವನ್ನು ಹಾಕಿದ್ದಾರೆ.

- Advertisement -

Related news

error: Content is protected !!