- Advertisement -
- Advertisement -
ಕಲ್ಲಡ್ಕ: ಕಟ್ಟೆಮಾರ್ ಶ್ರೀ ಮಂತ್ರದೇವತಾ ಸಾನಿಧ್ಯದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ರವರ ಸಮಾಜ ಸೇವೆಗಾಗಿ ಟೀಮ್ ಮಾಣಿಕ್ಯದಂಗಣ “ಮಾಣಿಕ್ಯದ ಬೊಲ್ಪು” ಬಿರುದನ್ನು ನೀಡಿ ಗೌರವಿಸಿದೆ.
ಕೊಡುಗೈದಾನಿಯಾಗಿ, ಅದೆಷ್ಟೋ ನೊಂದು ಬೆಂದು ಬಳಲಿದ ಜೀವಗಳ ಆಸರೆಯಾಗಿ, ಬಡ ಮಕ್ಕಳ ಉಜ್ವಲ ಭವಿಷ್ಯಕ್ಕೆ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾ, ಮಂತ್ರದೇವತಾ ಸಾನಿಧ್ಯವನ್ನು ಸಾಮಾಜಿಕ ಕ್ಷೇತ್ರವನ್ನಾಗಿಸಿ ತನ್ನ ಜೀವನವನ್ನು ಯಾವುದೇ ಪ್ರಚಾರವಿಲ್ಲದೆ ಸಮಾಜ ಸೇವೆಗಾಗಿ ಮೀಸಲಿಡುತ್ತಿದ್ದಾರೆ.
ಅವರ ನಿಷ್ಕಲ್ಮಶ ಸೇವೆಗೆ ಟೀಮ್ ಮಾಣಿಕ್ಯದಂಗಣ “ಮಾಣಿಕ್ಯದ ಬೊಲ್ಪು” ಬಿರುದನ್ನು ನೀಡಿ ಗೌರವಿಸಿ ದೇವರು ಸುಖ,ಶಾಂತಿ, ನೆಮ್ಮದಿ ಹಾಗೂ ಸಕಲೈಶ್ವರ್ಯವನ್ನಿತ್ತು ಕರುಣಿಸಲಿ ಎಂದು ತಂಡದ ಪರವಾಗಿ ಹಾರೈಸಿದರು. ಮನೋಜ್ ಕುಮಾರ್ ಕಟ್ಟೆಮಾರ್ ನಿವಾಸ ಪೂಜಾರಿ ಹಾಗೂ ರೇವತಿ ದಂಪತಿಗಳ ಪುತ್ರ.
- Advertisement -